ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗತ್ ಸಿಂಗ್ ಹೆಸರಿನಲ್ಲಿ ಸಾರ್ವಜನಿಕ ಗ್ರಂಥಾಲಯ ತೆರೆದ ಗೌತಮ್ ಗಂಭೀರ್

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟರ್, ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಯುವ ಪೀಳಿಗೆಗಾಗಿ ಭಗತ್ ಸಿಂಗ್ ಹೆಸರಿನಲ್ಲಿ ಸಾರ್ವಜನಿಕ ಗ್ರಂಥಾಲಯ ತೆರೆದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತ ಪಡಿಸಿರುವ ಗಂಭೀರ್, ಭಗತ್ ಸಿಂಗ್ ಕೇವಲ ಹೆಸರಲ್ಲ. ಅದೊಂದು ಶಕ್ತಿ. ಅದೊಂದು ಭಾವನೆ. ಇಂದು ನನ್ನ ಕ್ಷೇತ್ರದಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯವನ್ನು ತೆರೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವಶಕ್ತಿಯ ಜ್ಞಾನಾರ್ಜನೆಗಾಗಿ ಇದೀಗ ಒಂದು ಸಾರ್ವಜನಿಕ ಗ್ರಂಥಾಲಯ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಆನಂದ್ ವಿಹಾರ್, ಶಹದಾರ, ತ್ರಿಲೋಕಪುರಿ ಮತ್ತು ಮಯೂರ್ ವಿಹಾರ್‌ನಲ್ಲಿ ಕೂಡ ತಲಾ ಒಂದೊಂದು ಗ್ರಂಥಾಲಯ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು ಕ್ಷೇತ್ರದಲ್ಲಿ 5 ಸಾರ್ವಜನಿಕ ಗ್ರಂಥಾಲಯ ಪ್ರಾರಂಭಕ್ಕೆ ನಿರ್ಧರಿಸಲಾಗಿದೆ ಎಂದು ಸಂಸದರ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.

ಸಾರ್ವಜನಿಕ ಗ್ರಂಥಾಲಯ ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ತೆರೆದಿರಲಿದೆ. ಒಟ್ಟು 50 ಜನ ಕೂತು ಓದುವಂತಹ ಸೌಲಭ್ಯ ಕಲ್ಪಿಸಲಾಗಹಿದೆ. ಜೊತೆಗೆ ಉಚಿತ ವೈಫೈ ಮತ್ತು ಕಂಪ್ಯೂಟರ್‌ಗಳನ್ನು ಕೂಡ ಗ್ರಂಥಾಲಯದಲ್ಲಿ ಬಳಸಬಹುದಾಗಿದೆ.

Edited By : Vijay Kumar
PublicNext

PublicNext

23/03/2022 09:57 pm

Cinque Terre

36.84 K

Cinque Terre

4

ಸಂಬಂಧಿತ ಸುದ್ದಿ