ಚಂಡಿಗಢ: ನವಜೋತ್ ಸಿಂಗ್ ಸಿಧು ಒಬ್ಬ ಕ್ರೂರಿ. ಆತ ತಂದೆ ಸಾವಿನ ನಂತರ ಹೆತ್ತ ತಾಯಿಯನ್ನೇ ಮನೆಯಿಂದ ಹೊರಹಾಕಿದ್ದ ಎಂದು ಸಿಧು ಸಹೋದರಿ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಹೊತ್ತಿನಲ್ಲೇ ಸಿಧು ಮೇಲೆ ಇಂತದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಮೆರಿಕ ಮೂಲದ ಸುಮನ್ ತೂರ್ ಎಂಬ ಮಹಿಳೆಯೊಬ್ಬರು ಸಿಧು ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. 1986ರಲ್ಲಿ ತಮ್ಮ ತಂದೆ ಮೃತಪಟ್ಟ ಬಳಿಕ ನಮ್ಮ ವೃದ್ಧ ತಾಯಿಯನ್ನು ಸಿಧು ಕೈ ಬಿಟ್ಟ ನಂತರ 1989 ರಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಿರ್ಗತಿಕ ಮಹಿಳೆಯಾಗಿ ಅವರು ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ.
PublicNext
28/01/2022 10:13 pm