ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಜನಸಾಮಾನ್ಯರಿಗೆ ಅರ್ಥವಾಗದ ಈ " ಪೆಗಾಸಸ್ '' ಎಂಬ ಪದ ಬೆಳಗಾಗುವುದರಲ್ಲಿ ಪ್ರಸಿದ್ಧಿ ಪಡೆದಿದೆ. ಇಷ್ಟು ಮಾತ್ರವಲ್ಲ ಸರಕಾರದ ಮೇಲೆ ಪ್ರಯೋಗಿಸಲು ಪ್ರತಿಪಕ್ಷಗಳಿಗೊಂದು ಬ್ರಹ್ಮಾಸ್ತ್ರವಾಗಿದೆ. ಈ ಅದೃಶ್ಯ ಅಸ್ತ್ರ ಪ್ರಸಕ್ತ ಲೋಕಸಭೆ ಅಧಿಕವೇಶನದಲ್ಲಿ ಕೋಲಾಹಲ ಸೃಷ್ಠಿಸಿ 12 ದಿನಗಳ ಕಲಾಪಗಳನ್ನೇ ನುಂಗಿ ಹಾಕಿದೆ.
ಸರಕಾರ ಅಥವಾ ಅದರ ಬೇರೆ ಇಲಾಖೆಗಳ ಬಳಿ ಪೆಗಾಸಸ್ ಸ್ಪೈವೇರ್ ಇದೆಯೆ? ಒಂದು ವೇಳೆ ಇದ್ದರೆ ಯಾವ ರೀತಿಯಲ್ಲಿ ಬಳಸಲಾಗುತ್ತಿದೆ ಎಂಬುದು ಪ್ರತಿಪಕ್ಷಗಳದ್ದು ಒಂದೇ ಪ್ರಶ್ನೆ, ಆದರೆ ಸರಕಾರಕ್ಕೆ ಇದು ಬಿಸಿ ತುಪ್ಪ. ಇದೆ ಅಥವಾ ಇಲ್ಲ ಎಂಬ ಉತ್ತರ ನೀಡಲು ಸಾಧ್ಯವಾಗದೆ ಪರದಾಡುತ್ತಿದೆ.
ಪೆಗಾಸಸ್ ಸ್ಪೈ ವೇರ್ ಬಳಸಿ ಮೋದಿ ಸರಕಾರ ವಿರೋಧಿಗಳ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬುದು ಪ್ರತಿಪಕ್ಷಗಳು ಆರೋಪ. ಇದರಿಂದಾಗಿ ಲೊಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಈವರೆಗೂ ಕಲಾಪ ಠಪ್. ಖುದ್ದಾಗಿ ಪ್ರಧಾನಿ ಮೋದಿಯೇ ಸಮಜಾಯಿಸಿ ನೀಡಿದರೂ ವಿರೋಧ ಪಕ್ಷಗಳು ಡೋಂಟ್ ಕೇರ್.
ಇಸ್ರೇಲ್ ದ ಕಂಪನಿಯೊಂದು ಡೆವಲೆಪ್ ಮಾಡಿದ " ಪೆಗಾಸಸ್ '' ಸ್ಪೈವೇರ್ ಮೂಲಕ ವಿಶ್ವದ 50 ದೇಶಗಳ ಗಣ್ಯರ ಪೋನ್ ಹ್ಯಾಕ್ ಮಾಹಿತಿ ಕದಿಯಲಾಗುತ್ತಿದೆ. ಅದರಲ್ಲಿ ಭಾರತ 300 ಕ್ಕೂ ಹೆಚ್ಚು ಗಣ್ಯರು ಹಾಗೂ ಪತ್ರಕರ್ತರ ಹೆಸರುಗಳು ಸೇರಿವೆ ಎಂಬ ವಿಷಯವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳ ಒಕ್ಕೂಟ ಬಹಿರಂಗ ಪಡಿಸಿತ್ತು.
ಕೇಂದ್ರ ಸರಕಾರ ಪೆಗಾಸಸ್ ಮೂಲಕ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಪ್ರಶಾಂತ ಕಿಶೋರ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಹಾಗೂ ಪ್ರಮುಖ ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡಿದೆ ಎಂಬುದನ್ನು ಇಲ್ಲಿಯ ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದ್ದು ಈ ರಾದ್ದಾಂತಕ್ಕೆ ಕಾರಣವಾಯಿತು.
ಏನು ಈ ಪೆಗಾಸಸ್ ?
ಪೆಗಾಸಸ್ ಇಸ್ರೇಲ್ ದ ಕಂಪನಿಯೊಂದು ಅಭಿವೃದ್ಧಿ ಪಡಿಸಿದ ಸ್ಪೈವೇರ್. ವೈರಸ್ ರೀತಿಯಲ್ಲಿ ಮೋಬೈಲ್, ಲ್ಯಾಪ್ ಟಾಪ್, ಐ ಫೋನ್ , ಐ ಪ್ಯಾಡ್ ಗಳಲ್ಲಿ ಸುಲಭವಾಗಿ ನುಸುಳುತ್ತದೆ. ಬಹುತೇಕ ದೇಶಗಳು ಬೇಹುಗಾರಿಕೆಯಲ್ಲಿ ಹಾಗೂ ಉಗ್ರಗಾಮಿಗಳ ಚಟುವಟಿಕೆ ಮೇಲೆ ನಿಗಾ ವಹಿಸಲು ಇದನ್ನು ಬಳಸುತ್ತಿವೆ ಎಂಬುದು ಕಂಪನಿ ವಾದ.
ದುರುದ್ಧೇಶಪೂರಿತವಲ್ಲ ಪೆಗಾಸಸ್ ಸ್ಪೈವೇರನ್ನು ಅಧಿಕೃತವಾಗಿ ಎಲ್ಲ ದೇಶಗಳಿಗೆ ತಾನು ನೀಡುತ್ತಿದೆ ಎಂಬುದು ಇಸ್ರೇಲ್ ಕಂಪನಿ ಹೇಳಿಕೊಂಡಿದೆ.
ಲಕ್ಷಾಂತರ ಸ್ಮಾರ್ಟ ಫೋನ್ ಹ್ಯಾಕ್ ಮಾಡಬಹುದಾದ ಒಂದು ಪೆಗಾಸಸ್ ಲೈಸೆನ್ಸ್ ಬೆಲೆ ಸುಮಾರು 70 ಲಕ್ಷ ರೂ ಎಂದು ಹೇಳಲಾಗುತ್ತಿದೆ. ಈ ಸಾಫ್ಟ್ ವೇರ್ ಬಳಸಿ ನಮಗೆ ಅರಿಯದಂತೆ ಫೋನ್ ಅಥವಾ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ ಡಾಟಾ, ಇ-ಮೇಲ್ ,ವಿಡಿಯೋ, ಕಾಲ್ ಹಿಸ್ಟ್ರಿ , ಫೋಟೊ ಹಾಗೂ ಸಂಗ್ರಹಿತ ಎಲ್ಲ ದಾಖಲೆಗಳನ್ನು ಸುಲಭವಾಗಿ ಕದಿಯಬಹುದು.
ಇಷ್ಟೇ ಅಲ್ಲ ಜಿಪಿಎಸ್ ಮೂಲಕ ರಹಸ್ಯವಾಗಿ ನಿಮ್ಮ ಚಲನವಲನದ ಮೇಲೆ ನೀಗಾ ಇಡಬಹುದು, ನಿಮ್ಮ ಮೈಕ್ರೋಫೋನ್ ಬಳಸಿ ನೀವು ಬೇರೆಯವರೊಂದಿಗೆ ನಡೆಸುವ ಸಂಭಾಷಣೆ ಸಹ ರಿಕಾರ್ಡ ಮಾಡಿಕೊಳ್ಳಬಹುದು.
ಆಘಾತಕರ ಸಂಗತಿ ಎಂದರೆ ಪೆಗಾಸಸ್ ಮೂಲಕ ಕದ್ದ ಎಲ್ಲ ದಾಖಲೆ ಹಾಗೂ ಮಾಹಿತಿಗಳನ್ನು ನಿಮ್ಮ ಅನುಮತಿ ಇಲ್ಲದೆ ಮೂರನೆಯವರಿಗೆ ಮಾರಿಕೊಳ್ಳಬಹುದು.
ನಿಮ್ಮ ಫೋನ್, ಲ್ಯಾಪ್ ಟಾಪ್ ದಲ್ಲಿ ಹೀಗೆ ನುಸುಳುತ್ತೆ ?
ಮೊದಲು ಎನ್ ಕ್ರಿಪ್ಟ್ ಆಡಿಯೋ ನಂತರ ಎನ್ ಕ್ರಿಪ್ಟೆಡ್ ಮೆಸೆಜ್, ಐ-ಮೆಸೆಜ್, ವಾಟ್ಸಪ್ ಮೆಸೆಜ್ ಬಂದು ಬೀಳುತ್ತವೆ. ಆ ಮೇಲೆ ಮಿಸ್ಡ್ ಕಾಲ್ ಬರತೊಡಗುತ್ತವೆ. ನಾವು ಲಿಂಕ್ ಕ್ಲಿಕ್ ಮಾಡಿದ ಇಲ್ಲವೆ ಮಿಸ್ಡ್ ಕಾಲ್ ರಿಸೀವ್ ತಕ್ಷಣ ನಮ್ಮ ಡಿವೈಸ್, ಅನ್ಯ ವ್ಯಕ್ತಿಯ ಡಿವೈಸ್ ಗೆ ಕನೆಕ್ಟ್ ಆಗುತ್ತದೆ. ಆ ಮೇಲೆ ನಮಗೆ ತಿಳಿದಯ ಹಾಗೆಯೇ ಎಲ್ಲ ದಾಖಲೆ ರವಾನೆಯಾಗ ತೊಡಗುತ್ತವೆ. ದುರಂತ ಸಂಗತಿ ಎಂದರೆ ಪೆಗಾಸಸ್ ನ್ನು ಯಾವುದೇ ಸರ್ವಿಸ್ ಪ್ರೊವೈಡರ್ ಗಳಿಗೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ಒಂದು ವೇಳೆ ನೀವು ಅನ್ ನೋನ್ ನಂಬರ್ ಎಂದು ಡಿಲೀಟ್ ಮಾಡಿದರೂ ಅದು ಡಿಲೀಟ್ ಆಗುವುದಿಲ್ಲ. ಪದೆ ಪದೆ ಮಿಸ್ಡ್ ಕಾಲ್ ಬರುತ್ತಲೆ ಇರುತ್ತದೆ. ಬೇಜಾರಾಗಿ ನೀವು ರಿಸಿವ್ ಮಾಡಿದರೆ ಬಿತ್ತು ಟೋಪಿ ಎಂದೇ ಭಾವಿಸಬೇಕು. ಹೀಗಾಗಿ ಅನಗತ್ಯ ಬರುವ ಲಿಂಕ್ ಅಥವಾ ಮಿಸ್ಡ್ ಕಾಲ್ ಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು.
PublicNext
04/08/2021 04:16 pm