ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರದ ಗುಡುಗಿಗೆ 1,398 ಟ್ವಿಟ್ಟರ್ ಖಾತೆಗಳು ಡಿಲೀಟ್

ನವದೆಹಲಿ: ಕೇಂದ್ರ ಸರ್ಕಾರದ ಗುಡುಗಿಗೆ ಬೆಚ್ಚಿದ ಟ್ವಿಟ್ಟರ್‌ ಆಡಳಿತ ಮಂಡಳಿಯು ಸುಮಾರು 1,398 ಟ್ವಿಟ್ಟರ್ ಖಾತೆಗಳನ್ನು ಡಿಲೀಟ್ ಮಾಡಿದೆ.

ಹೌದು. ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನ ಮತ್ತು ಖಲಿಸ್ತಾನ್ ಬೆಂಬಲಿಗರು ಟ್ವೀಟ್ ಮೂಲಕ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಕೇಂದ್ರ ಸರ್ಕಾರವು 1,435 ಟ್ವಿಟ್ಟರ್‌ ಖಾತೆಗಳನ್ನ ನಿರ್ಬಂಧಿಸುವಂತೆ ಟ್ವಿಟರ್‌ಗೆ ಸೂಚನೆ ನೀಡಿತ್ತು. ಆದರೆ ಟ್ವಿಟ್ಟರ್ ಶೇ.97 ಖಾತೆಗಳನ್ನ ಮಾತ್ರ ನಿರ್ಬಂಧಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರೈತರ 'ನರಮೇಧ' ಹ್ಯಾಶ್‌ಟ್ಯಾಗ್ ಮತ್ತು ಪಾಕಿಸ್ತಾನ ಮತ್ತು ಖಲಿಸ್ತಾನ್ ಸಹಾನುಭೂತಿದಾರರ ಬೆಂಬಲದೊಂದಿಗೆ ಖಾತೆಗಳು ಎಂದು ದೂರಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು, ಎರಡು ಪ್ರತ್ಯೇಕ ವಿನಂತಿಗಳ ಮೂಲಕ ಫ್ಲ್ಯಾಗ್ ಮಾಡಿದ 1,435 ಹ್ಯಾಂಡಲ್‌ಗಳಲ್ಲಿ 1,398 ಅನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

12/02/2021 05:12 pm

Cinque Terre

67 K

Cinque Terre

4

ಸಂಬಂಧಿತ ಸುದ್ದಿ