ಬೆಳಗಾವಿ: ಭಾರತ ಸ್ವಾತಂತ್ರ್ಯದ ಅಪ್ರತಿಮ ಹೋರಾಟಗಾರ ವೀರ ಸಾರ್ವಕರ್, ಮುಸ್ಲಿಂ ವಿರೋಧಿಯಲ್ಲ. ಅಂತಹ ವ್ಯಕ್ತಿಯ ಭಾವಚಿತ್ರ ಎಲ್ಲಡೆ ಹಾಕಲು ಯಾವ ಹಂಗೂ ಇಲ್ಲ. ಈ ಬಾರಿ ಗಣೇಶೋತ್ಸವದಲ್ಲಿ ಎಲ್ಲೆಡೆ ವೀರ್ ಸಾರ್ವಕರ್ ಅವರ ಭಾವ ಚಿತ್ರ ಹಾಕಲಾಗುತ್ತದೆ. ಇದನ್ನ ಕಾಂಗ್ರೆಸ್ ಅಥವಾ ಮುಸ್ಲಿಂರು ಮುಟ್ಟಿದರೆ ಮುಲಾಜಿಲ್ಲದೆ ಅವರ ಕೈ ಕತ್ತರಿಸುತ್ತೇವೆ ಎಂದು ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಬೆಳಗಾವಿಯಲ್ಲಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಒಬ್ಬ ದೇಶ ಭಕ್ತ ಸ್ವಾತಂತ್ರ್ಯಕ್ಕಾಗಿ 23 ವರ್ಷಗಳ ಕಾಲ ಜೈಲಿನಲ್ಲಿ ತನ್ನ ಜೀವನವನ್ನು ಕಳೆದು ಸ್ವಾತಂತ್ರ್ಯಕ್ಕಾಗಿ ಮಡಿದ ವೀರ ಸಾರ್ವಕರ್ ಅವರನ್ನು ಯಾರಾದ್ರೂ ಅಪಮಾನ ಮಾಡುವುದಾಗಲಿ ಅಥವಾ ಅವರ ಭಾವ ಚಿತ್ರಗಳನ್ನು ಹರಿಯುವುದಾಗಲಿ ಮಾಡಿದ್ರೆ ಯಾವುದೇ ಭಾರತೀಯ ಸಹಿಸುವುದಿಲ್ಲ ಎಂದು ಗುಡುಗಿದರು.
ಈ ಕಾಂಗ್ರೆಸ್‌ನವರಿಗೆ ರಾಜೀವ ಗಾಂಧಿ, ಇಂದಿರಾ ಗಾಂಧಿ, ಮಹಾತ್ಮ ಗಾಂಧಿ ಮತ್ತು ರಾಹುಲ್ ಗಾಂಧಿ ಬಿಟ್ಟರೆ ಇನ್ನುಳಿದವರು ಯಾರು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ತಿಳಿದುಕೊಂಡಿದ್ದಾರೆ. ಲಕ್ಷಾಂತರ ಹೋರಾಟಗಾರ ಪ್ರಾಣಾರ್ಪಣೆಯಿಂದಾಗಿ ಸ್ವಾತಂತ್ರ್ಯ ದೊರಕಿ ಇದೀಗ ೭೫ ವರ್ಷಗಳಾಗಿವೆ.
ಇದೆ ವೇಳೆ ಮಾತನಾಡಿದ ಮುತಾಲಿಕ್, ಸ್ವತಃ ಕಾಂಗ್ರೆಸ್ಸಿನ ಇಂದಿರಾ ಗಾಂಧಿಯವರು ಪ್ರಧಾನಿ ಇದ್ದಾಗ ಸಾರ್ವಕರ್ ಅವರು ಒಬ್ಬ ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಂದು ಪತ್ರ ಬರೆದಿದ್ದಾರೆ. ಮತ್ತು ಅಂಚೆ ಚೀಟಿಯನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಅಂತಹ ವೀರ ಪುರುಷನ ಸಮಾನವಾಗಿ ಯಾವ ಗಾಂಧಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
PublicNext
23/08/2022 01:09 pm