ಮೈಸೂರು: ಕೃಷ್ಣ ಜನ್ಮಭೂಮಿ, ಹಾಗೂ ಕಾಶಿ ವಿಶ್ವನಾಥ ಮಂದಿರ ವಿವಾದಗಳೇ ನಮ್ಮ ಮುಂದಿನ ಗುರಿ ಎಂದು ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಮೈಸೂರು ಹಿಂದೂ ಫೋರಂ ಸಹಯೋಗದಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ರಾಮಜನ್ಮಭೂಮಿ ವಿವಾದ ಮುಗಿದಿದೆ. ಇನ್ಮುಂದೆ ಕಾಶಿ ವಿಶ್ವನಾಥ ಮಂದಿರ ಹಾಗೂ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಹಿಂದೂ-ಮುಸ್ಲಿಂ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
PublicNext
24/04/2022 07:58 am