ಬೆಳಗಾವಿ: ಮುಸ್ಲಿಮರು ಒಳ್ಳೆಯವರು. ಆದ್ರೆ ಇಸ್ಲಾಂ ತುಂಬ ಕೆಟ್ಟದ್ದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸದ್ಯ ಧಾರ್ಮಿಕ ಕ್ಷೇತ್ರಗಳಿಗೆ ಮುಸ್ಲಿಮರ ವಾಹನಗಳಲ್ಲಿ ಹೋಗಬಾರದು ಎಂಬ ಅಭಿಯಾನ ಶುರುವಾಗಿದೆ. ಭಾರತ ರಕ್ಷಣಾ ವೇದಿಕೆ ಎಂಬ ಸಂಘಟನೆ ಈ ಅಭಿಯಾನವನ್ನು ಆರಂಭಿಸಿದೆ. ತೀರ್ಥ ಕ್ಷೇತ್ರ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ಹೋಗುವಾಗ ಮುಸ್ಲಿಮರ ವಾಹನದಲ್ಲಿ ಅಥವಾ ಮುಸ್ಲಿಂ ಚಾಲಕನೊಂದಿಗೆ ಹೋಗಬಾರದು ಎಂಬ ಉದ್ದೇಶಕ್ಕೆ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಶ್ರೀರಾಮ ಸೇನೆಯಿಂದ ಸಂಪೂರ್ಣ ಬೆಂಬಲ ಇದೆ. ಹಿಂದೂ ಸಮಾಜ ಜಾಗೃತವಾಗುತ್ತಿದೆ ಎಂಬುದಕ್ಕೆ ಈ ಅಭಿಯಾನ ಸಾಕ್ಷಿಯಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
PublicNext
08/04/2022 07:25 pm