ಬೆಂಗಳೂರು: ತಂತ್ರಜ್ಞಾನ ಮುಂದುವರಿದಿದೆ, ಅಲಾರಾಂ ಫಿಕ್ಸ್ ಮಾಡಿಕೊಂಡು ನಮಾಜ್ ಮಾಡಲು ತೆರಳಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಜಾನ್ ಮೈಕ್ ಬ್ಯಾನ್ ವಿಚಾರದ ಪ್ರತಿಕ್ರಿಯೆ ನೀಡಿದ್ದಾರೆ.
ಅಜಾನ್ ಎನ್ನುವುದು ನಮಾಜ್ ಮಾಡಲಿಕ್ಕೆ ಬನ್ನಿ ಎನ್ನುವ ಕರೆ. ಧ್ವನಿವರ್ಧಕ ಶುರುವಾಗಿ ಸಾವಿರಾರು ವರ್ಷಗಳು ಕಳೆದಿಲ್ಲ. ತಂತ್ರಜ್ಞಾನ ಬಳಸಿಕೊಂಡು ಮತ್ತೊಬ್ಬರಿಗೆ ತೊಂದರೆ ಆಗುವುದನ್ನು ತಡೆಯಬೇಕು ಎಂದು ಸಿಟಿ ರವಿ ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಮಾತನಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ. ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ರಾಜ್ಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿ ಎಂದು ಕಿಡಿಕಾರಿದ್ದಾರೆ.
PublicNext
05/04/2022 11:00 am