ಮೈಸೂರು: ಶಾಲಾ-ಕಾಲೇಜು ಅಷ್ಟೇ ಅಲ್ಲ. ದೇಶಾದ್ಯಂತ ಬುರ್ಖಾ ನಿಷೇಧಿಸಬೇಕು. ಶಾಲೆಗೆ ಬುರ್ಖಾ ಧರಿಸಿ ಬಂದರೆ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ -ತಂಗಿ- ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ? ಮನೆಯಲ್ಲಿ ತಂದೆ- ತಾಯಿ ಇದ್ದಂತೆ ಶಾಲೆಯಲ್ಲಿ ಶಿಕ್ಷಕರು ಇರುತ್ತಾರೆ. ಸಹಪಾಠಿಗಳು ಸಹೋದರರಂತೆ ಅವರನ್ನು ಅನುಮಾನಿಸಿದರೆ ಹೇಗೆ? ಬುರ್ಖಾ ಧರಿಸಿಕೊಂಡು ಬಂದು ಬೇರೆ ಯಾರೋ ಪರೀಕ್ಷೆ ಬರೆದರೆ ಯಾರು ಹೊಣೆ? ಎಂದು ಕಾಳಿ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಸಿಲಿನಲ್ಲಿ ಹೆಣ್ಣುಮಕ್ಕಳಿಗೆ ಬುರ್ಖಾ ಧರಿಸಿ ಹೋಡಾಡುವುದು ಕಷ್ಟವಾಗುತ್ತಿದೆ. ಬುರ್ಖಾ ಧರಿಸುವುದರಿಂದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಬುರ್ಖಾ ಎನ್ನುವುದೇ ಒಂದು ಬಂಧೀಖಾನೆ. ನಿಮ್ಮ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲದಿರುವುದಾಗ ಇದು ಅಗತ್ಯವೆನಿಸಿದೆಯೇ? ಒಂದು ವೇಳೆ ಅವರಿಗೆ ಇಸ್ಲಾಂ ನಲ್ಲಿ ರಕ್ಷಣೆಯಿಲ್ಲ ಎನ್ನುವುದಾದರೆ, ನಮ್ಮ ಧರ್ಮಕ್ಕೆ ಬನ್ನಿ ನಾವು ರಕ್ಷಣೆ ಕೊಡುತ್ತೇವೆ ಎಮದು ಕಾಳಿ ಸ್ವಾಮೀಜಿ ಹೇಳಿದ್ದಾರೆ.
PublicNext
28/01/2022 10:38 pm