ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಡೇ ಪ್ರೇಯರ್, ನಮಾಜ್ ನಡೆಯುತ್ತಿದೆ: ಗಣೇಶೋತ್ಸವಕ್ಕೂ ಅನುಮತಿ ಕೊಡಿ: ಪ್ರತಾಪ್ ಸಿಂಹ

ಮೈಸೂರು: ಮಜೀದ್‌ಗಳಲ್ಲಿ ಸಾಮೂಹಿಕ ನಮಾಜ್ ನಡೆಯುತ್ತಿದೆ. ಚರ್ಚ್‌ಗಳಲ್ಲಿ ಸಂಡೇ ಮಾಸ್ ನಡೆಯುತ್ತಿದೆ. ಅದರಂತೆ ಸಾಮೂಹಿಕ ಗಣೇಶೋತ್ಸವಕ್ಕೂ ಅನುಮತಿ ಕೊಡಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್, ಚರ್ಚ್ ಗಳಲ್ಲಿ ಸಂಡೆ ಮಾಸ್ ಗೆ ಅವಕಾಶ ನೀಡಲಾಗಿದೆ. ಹಾಗೆಯೇ ಗಣೇಶೋತ್ಸವಕ್ಕೂ ಅವಕಾಶ ನೀಡಿ. ಕೋವಿಡ್ ನಿಯಮಾವಳಿ ಕಟ್ಟುನಿಟ್ಟಿನ ಅನುಷ್ಠಾನ ಮಾಡಿ, ಅವಕಾಶ ಮಾಡಿಕೊಡಿ. ಅದ್ಧೂರಿಯಾಗಿಯೇ ಮಾಡಬೇಕೆಂದು ಹೇಳುತ್ತಿಲ್ಲ. ಆದರೆ ಉತ್ಸವ ನಡೆಸಲು ಅನುಮತಿ ಕೊಡಿ ಎಂದು ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

25/08/2021 03:44 pm

Cinque Terre

41.51 K

Cinque Terre

32

ಸಂಬಂಧಿತ ಸುದ್ದಿ