ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ನನ್ನನ್ನ ಸಿಎಂ ಮಾಡಲು ಮುಂದಾಗಿದ್ದರು: ಎಚ್‌ಡಿಕೆ ಬಾಂಬ್

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರೇ ನನ್ನನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿರಾದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಪ್ರಧಾನಿ ಮೋದಿಯವರೇ ನನಗೆ ಸಿಎಂ ಆಫರ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನಿಮ್ಮನ್ನ 5 ವರ್ಷಗಳ ಕಾಲ ಯಾರೂ ಟಚ್ ಮಾಡಲ್ಲ ಅಂತ ಹೇಳಿದ್ದರು. ಆದರೆ ಕಾಂಗ್ರೆಸ್‌ನ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ಈಗ ದರಿದ್ರ ಸರ್ಕಾರ ಬಂದಿದೆ. ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಹಾಸನದಲ್ಲಿ ಭಾಷಣ ಮಾಡಿದ್ದರು. ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಎಷ್ಟೇ ಹೇಳಿದರೂ ಕೇಳದೇ ಕಾಂಗ್ರೆಸ್​ನವರು ನನಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

30/09/2020 05:46 pm

Cinque Terre

144.14 K

Cinque Terre

29