ಗುವಾಹಟಿ:ಘೇಂಡಾಮೃಗಗಳ 2,479 ಕೊಂಬುಗಳನ್ನು ಸುಟ್ಟು ಹಾಕಿದ ಅಸ್ಸಾಮ್ ರಾಜ್ಯ ಸರ್ಕಾರ ಇದೊಂದು ಐತಿಹಾಸಿಕ ದಿನ ಎಂದು ಹೇಳಿಕೊಂಡಿದೆ. ಬುಧವಾರ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಈ ಕೊಂಬುಗಳನ್ನು ಪೂಜಾ ವಿಧಿ ವಿಧಾನಳೊಂದಿಗೆ ಸುಡಲಾಗಿದೆ ಎಂದು ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಅವರು "ಘೇಂಡಾಮೃಗಗಳು ಕೇವಲ ಪ್ರಾಣಿಯಲ್ಲ. ಅವು ನಮ್ಮ ಅಸ್ಮಿತೆ. ಅವುಗಳ ಕೊಂಬಿನಲ್ಲಿ ಭಾರಿ ಔಷಧಿ ಗುಣ ಇದೆ ಎಂದು ತಪ್ಪು ತಿಳಿದು ಅವುಗಳನ್ನು ಕೊಲ್ಲಲಾಗುತ್ತಿತ್ತು. ಇದುವರೆಗೆ ಸಂರಕ್ಷಿಸಿ ಇಡಲಾಗಿದ್ದ 2479 ಕೊಂಬುಗಳನ್ನು ಇಂದು ಸುಡಲಾಗಿದೆ. ಪ್ರಾಣಿ ಸಂರಕ್ಷಣಾ ವಿಚಾರದಲ್ಲಿ ಇದೊಂದು ಕ್ರಾಂತಿಕಾರಕ ನಡೆ. ಕೇಂದ್ರ ಸರ್ಕಾರದ ಸೂಚನೆಯಂತೆ ಈ ಕೊಂಬುಗಳನ್ನು ಸುಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
PublicNext
22/09/2021 04:00 pm