ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ನೂತನ ಸಿಎಂ ಸ್ಥಳಕ್ಕೆ ಬರಲೇಬೇಕು: ಅಥಣಿ ಪ್ರವಾಹ ಸಂತ್ರಸ್ತರ ಒತ್ತಾಯ

ಅಥಣಿ: ಪ್ರತಿ ವರ್ಷ ಮಹಾರಾಷ್ಟ್ರದ ಮತ್ತು ಬೆಳಗಾವಿಯ ಗಡಿಭಾಗದಲ್ಲಿ ಸುರಿಯುವ ಮಳೆಗೆ ಗಡಿ ಜಿಲ್ಲೆಯ ಜನರ ಬಾಳು ಪ್ರವಾಹದಿಂದ ನಲುಗಿ ಹೋಗಿದೆ. ನಿತ್ಯ ವರ್ಷ ಇದೇ ಪ್ರವಾಹ ಸಂತ್ರಸ್ತರ ಗೋಳಾದ್ರೂ ಇದುವರೆಗೆ ಇವರಿಗೆ ನ್ಯಾಯ ದೊರುಕುತ್ತಿಲ್ಲ. ಹೀಗಾಗಿ, ಕಳೆದ ವರ್ಷದ ಪ್ರವಾಹದ ಪರಿಹಾತ ಸೇರಿದಂತೆ ಪ್ರಸಕ್ತ ವರ್ಷದ ಪ್ರವಾಹ ಪರಿಸ್ಥಿತಿಯ ಪರಿಶೀಲನೆಗಾಗಿ ಈ ಗಡಿ ಭಾಗದ ಜನರು ಮತ್ತೇ ಸಿಎಂ ಬರಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ‌

ಕೆಲವು ದಿನಗಳಷ್ಟೇ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರು ಬಂದು ಸಮೀಕ್ಷೆ ನಡೆಸಿ ಹೋದರು ಏನು ಪ್ರಯೋಜನವಾಗುತ್ತಿಲ್ಲ, ಹೀಗಾಗಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ನೀಡಬೇಕು ಎಂದು ಪ್ರವಾಹ ಸಂತ್ರಸ್ತರು ಆಗ್ರಹ ಮಾಡಿದ್ದಾರೆ.

ಈಗಾಗಲೇ ಕೃಷ್ಣಾ ನದಿ ತೀರದ ಜನರ ಜೀವನ ಪ್ರವಾಹಕ್ಕೆ ಕೊಚ್ಚಿಹೊಗಿದೆ. ಕೃಷ್ಣೆಯ ಪ್ರವಾಹಕ್ಕೆ ತತ್ತರಿಸಿದ ಝುಂಜರವಾಡ ಗ್ರಾಮಸ್ಥರ ಗೊಳು ಕೇಳುವವರು ಯಾರು ಎಂಬುವುದು ಅಲ್ಲಿಯ ಜನರ ಆಕ್ರೋಶಭರಿತ ಮಾತುಗಳಾಗಿವೆ

ಅಥಣಿ ತಾಲೂಕಿನ ಝುಂಜರವಾಡ ಗ್ರಾಮ ಅಷ್ಟೇ ಅಲ್ಲ. ಇನ್ನು ಹಲವಾರು ಗ್ರಾಮಗಳು ಜಲಾವೃತಗೊಂಡು ನಡುಗಡ್ಡೆಯಾಗಿ ಸಾಕಷ್ಟು ಪ್ರಾಣ ಹಾನಿ ಮತ್ತು ಬೆಳೆಹಾನಿಗಳಾದರೂ ಈ ಭಾಗದ ನೆರೆ ಸಂತ್ರಸ್ತರನ್ನ ಸಂಪೂರ್ಣ ತಾಲೂಕಿನಲ್ಲಿ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಅಲ್ಲಿಯ ಜನರು ಮಾಡುತ್ತಿದ್ದಾರೆ. ಪ್ರವಾಹ ಬಂದು ಸಾಕಷ್ಟು ಹಾನಿಯಾಗಿ, ಸಾವು ನೋವುಗಳು ಸಂಭವಿಸಿದರು, ಯಾವುದೇ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ವರೆಗೂ ಗ್ರಾಮಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿಲ್ಲ.‌ಅದ್ದರಿಂದ ಜನರು ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ‌

ಜನರಿಗೆ ಸಮಸ್ಯೆ ಅಂತ ಬಂದಾಗ, ತಾಲೂಕಾ, ಜಿಲ್ಲಾಡಳಿತ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿ ಅದು ವಿಫಲವಾಗಿದೆ. ‌ಇದ್ದರಿಂದ ತೊಂದರೆ ಅನುಭವಿಸಿರು ಸಂತ್ರಸ್ತರು.‌ ಸರ್ಕಾರದ ಬೇಜವಾಬ್ದಾರಿ ಧೋರಣೆ ಖಂಡಿಸಿ ತಕ್ಷಣ ಅಥಣಿ ತಾಲೂಕಿಗೆ ಸಿಎಂ ಬರಬೇಕೆಂದು ಪಟ್ಟು ಹಿಡಿದಿದ್ದಾರೆ. ‌

ನೂತನವಾಗಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬೊಮ್ಮಾಯಿ ಅವರು ತಮ್ಮ ಪಕ್ಷ ಸಂಘಟನೆ, ಮಂತ್ರಿ ಮಂಡಳ ರಚನೆ, ದೆಹಲಿ ಟೂರ್ ಅಂತ ಸಮಯ ವ್ಯತಯ ಮಾಡುತ್ತಿದ್ದು, ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದೆ.

Edited By : Manjunath H D
PublicNext

PublicNext

31/07/2021 02:16 pm

Cinque Terre

185.79 K

Cinque Terre

2