ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಕೊರೋನಾ ಸೋಂಕಿಗೆ ಒಳಗಾಗಿದರೆ ಮಮತಾ ಬ್ಯಾನರ್ಜಿ ತಬ್ಬಿಕೊಳ್ಳುತ್ತೇನೆ: ಬಿಜೆಪಿ ಮುಖಂಡ

ಕೋಲ್ಕತ್ತಾ: ಒಂದು ವೇಳೆ ನಾನು ಕೊರೋನಾ ಸೋಂಕಿಗೆ ಒಳಗಾಗಿದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುವುದಾಗಿ ಹೊಸದಾಗಿ ನೇಮಕಗೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸುವ ರೀತಿ ಕರುಣಾಜನಕವಾಗಿದೆ, ಮೃತದೇಹಗಳನ್ನು ಸೀಮೆಎಣ್ಣೆಯಿಂದ ಸುಡಲಾಗುತ್ತಿದೆ, ನಾವು ಸತ್ತ ಬೆಕ್ಕುಗಳನ್ನು ಅಥವಾ ನಾಯಿಗಳನ್ನು ಸಹ ಆ ರೀತಿ ಪರಿಗಣಿಸುವುದಿಲ್ಲ. ಕೋವಿಡ್-19 ನಿಂದ ಮೃತಪಟ್ಟ ಪೋಷಕರ ಮುಖಗಳನ್ನು ಮಕ್ಕಳಿಗೆ ತೋರಿಸುತ್ತಿಲ್ಲ ಎಂದು ಹಜ್ರಾ ಕಿಡಿಕಾರಿದ್ದಾರೆ.

ದಕ್ಷಿಣ 24 ಪರಗಣದ ಬರುಯಿಪುರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ಪೊಲೀಸ್ ದೂರು ದಾಖಲಿಸಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಕೊರೋನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ, ಒಂದು ವೇಳೆ ನನಗೆ ಕೊರೋನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ತಬ್ಬಿಕೊಳ್ಳುತ್ತೇನೆ, ಕೋವಿಡ್ ರೋಗಿಗಳ ಕುಟುಂಬಗಳ ನೋವನ್ನು ಅನುಭವಿಸುವಂತೆ ಮಾಡುವುದಾಗಿ ಹಜ್ರಾ ತಿಳಿಸಿದ್ದಾರೆ.

ಟಿಎಂಸಿ ಹಜ್ರಾ ಹೇಳಿಕೆಯ ವಿರುದ್ಧ ಸಿಲಿಗುರಿಯಲ್ಲಿ ಪೊಲೀಸ್ ದೂರು ದಾಖಲಿಸಿದೆ. ನಾವು ಅನುಪಮ್ ಹಜ್ರಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದೇವೆ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

Edited By :
PublicNext

PublicNext

29/09/2020 10:35 am

Cinque Terre

71.37 K

Cinque Terre

0