ನವದೆಹಲಿ : ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಇಡಿ ನ್ಯಾಯಾಲಯ ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆಯಾಗಿದೆ. ಪ್ರಕರಣ ಮೂವರು ಆರೋಪಿಗಳು ಜಾರ್ಜ್ ಶೀಟ್ ಜೊತೆಗೆ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳನ್ನು ಒದಗಿಸುವಂತೆ ಕೇಳಿದ ಹಿನ್ನೆಲೆ ವಿಚಾರಣೆ ಮುಂದೂಡಲಾಯಿತು.
ಇಂದು ವಿಚಾರಣೆ ವೇಳೆ ಪ್ರಕರಣ ಇತರೆ ಆರೋಪಿಗಳಾದ ಸಚಿನ್ ನಾರಯಣ್, ಸುನೀಲ್ ಶರ್ಮಾ, ರಾಜೇಂದ್ರ. ಎನ್, ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಇಡಿ ಪರ ವಕೀಲರು, ತರ್ಜುಮೆ ಮಾಡಿ ದಾಖಲೆಗಳನ್ನು ನೀಡಲು ನಾಲ್ಕೈದು ವಾರಗಳ ಸಮಯಬೇಕು ಎಂದು ಕೋರ್ಟ್ ಗೆ ಹೇಳಿದರು. ವಾದ ಪ್ರತಿ ವಾದ ಆಲಿಸಿದ ಬಳಿಕ ಕೋರ್ಟ್ ವಿಚಾರಣೆ ಮುಂದೂಡಿತು.
ವಿಚಾರಣೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಈಗಾಗಲೇ ಜಾಮೀನು ಸಿಕ್ಕಿದೆ. ಅದಾಗ್ಯೂ ನ್ಯಾಯಾಲಯಕ್ಕೆ ಗೌರವ ಕೊಟ್ಟು ಕೋರ್ಟ್ ಗೆ ಹಾಜರಾಗಿದ್ದೆ. ಇತರೆ ಆರೋಪಿಗಳು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಕೊಟ್ಟ ಬಳಿಕ ಮುಂದೆ ನೋಡಿಕೊಂಡು ಮಾತನಾಡುತ್ತೇನೆ ಎಂದರು.
PublicNext
17/08/2022 01:39 pm