ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಪ್ರೀಂ ಕೋರ್ಟ್ ಮೇಲೆ ಭರವಸೆ ಉಳಿದಿಲ್ಲ: ಕಪಿಲ್ ಸಿಬಲ್

ನವದೆಹಲಿ: ಸುಪ್ರೀಂ ಕೋರ್ಟ್ ಮೇಲೆ ಯಾವುದೇ ಭರವಸೆ ಉಳಿದಿಲ್ಲ. ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕೆಲವೇ ಜಡ್ಜ್‌ಗಳಿಗೆ ವಹಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನಿಂದ ಪರಿಹಾರ ದೊರೆಯಲಿದೆ ಎಂಬುದಾಗಿ ನೀವು ಭಾವಿಸಿದರೆ ಅದು ದೊಡ್ಡ ತಪ್ಪು. 50 ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ಈ ಮಾತು ಹೇಳುತ್ತಿದ್ದೇನೆ. ಮಹತ್ವದ ತೀರ್ಪು ನೀಡಿದರೂ ಅದು ವಾಸ್ತವಕ್ಕೆ ಸನಿಹದಲ್ಲಿರುವುದಿಲ್ಲ' ಎಂದು ಹೇಳಿದ್ದಾರೆ.

'50 ವರ್ಷಗಳ ಕಾಲ ನಾನು ವಕೀಲಿ ವೃತ್ತಿ ನಡೆಸಿರುವ ನ್ಯಾಯಾಲಯದ ಬಗ್ಗೆ ಹೀಗೆ ಮಾತನಾಡಲು ನಾನು ಬಯಸುವುದಿಲ್ಲ. ಆದರೆ ಹಾಗೆ ಮಾತನಾಡುವ ಸಮಯವೀಗ ಬಂದಿದೆ. ನಾವು ಮಾತನಾಡದಿದ್ದರೆ ಇನ್ಯಾರು ಮಾತನಾಡಬೇಕು? ವಾಸ್ತವ ಏನೆಂದರೆ ಸಮಸ್ಯಾತ್ಮಕ ಎಂದು ನಮಗೆ ತಿಳಿದಿರುವ ಯಾವುದೇ ಸೂಕ್ಷ್ಮ ವಿಷಯವನ್ನು ನಿರ್ದಿಷ್ಟ ನ್ಯಾಯಾಧೀಶರ ಮುಂದೆ ಇರಿಸಲಾಗುತ್ತದೆ ಮತ್ತು ಫಲಿತಾಂಶವೇನು ಎನ್ನುವುದು ನಮಗೆ ಗೊತ್ತಿರುತ್ತದೆ' ಎಂದಿದ್ದಾರೆ.

ಸಿಬಲ್ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ವಕೀಲರ ಸಂಘ (ಎಐಬಿಎ) ‘ಅವಹೇಳನಕಾರಿ’ ಎಂದು ಕರೆದಿದೆ. ದೃಢವಾದ ವ್ಯವಸ್ಥೆಯು ಕಾನೂನಿನಿಂದ ಮಾತ್ರವೇ ಪ್ರೇರಿತವಾಗಿದ್ದು, ಭಾವನೆಗಳಿಂದಲ್ಲ. ಕಪಿಲ್ ಸಿಬಲ್ ಅವರೊಬ್ಬ ಹಿರಿಯ ನ್ಯಾಯವಾದಿ. ನ್ಯಾಯಾಲಯವು ತಮ್ಮ ಅಥವಾ ಸಹೋದ್ಯೋಗಿಗಳ ಸಲ್ಲಿಕೆಗಳನ್ನು ಒಪ್ಪಿಲ್ಲ ಎಂಬ ಕಾರಣಕ್ಕಾಗಿ ನ್ಯಾಯಾಲಯ ಮತ್ತು ನ್ಯಾಯಾಧೀಶರ ತೀರ್ಪುಗಳನ್ನು ನಿರಾಕರಿಸುವುದು ಅವರಿಗೆ ಭೂಷಣವಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಡಾ. ಆದೀಶ್ ಸಿ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.

Edited By : Vijay Kumar
PublicNext

PublicNext

08/08/2022 11:02 pm

Cinque Terre

59.47 K

Cinque Terre

10