ಲಕ್ನೋ: ಉತ್ತರ ಪ್ರದೇಶದ ಬುಲ್ಡೋಜರ್ ಸರ್ಕಾರ ಎಂಬ ಪದ ದೇಶದಲ್ಲೆಡೆ ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಸದ್ಯ ಇಲ್ಲಿ ಮತ್ತೆ ಬುಲ್ಡೋಜರ್ ಸುದ್ದಿ ಮಾಡಿದೆ. ಮಹಿಳೆಯೊಬ್ಬರನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ರಾಜಕಾರಣಿಯೊಬ್ಬರ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ.
ಬಿಜೆಪಿಯ ಕಿಸಾನ್ ಮೋರ್ಚಾದ ನಾಯಕ ಎಂದು ಹೇಳಲಾದ ಶ್ರೀಕಾಂತ್ ತ್ಯಾಗಿ ಎಂಬುವರ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಸದ್ಯ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದು, ಪೊಲೀಸರು ಸತತ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಶ್ರೀಕಾಂತ್ ತ್ಯಾಗಿ ಬಗ್ಗೆ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನವನ್ನೂ ಘೋಷಿಸಲಾಗಿದೆ. ಶ್ರೀಕಾಂತ್ ತ್ಯಾಗಿಗೂ ನಮಗೂ ಏನೇನೂ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ.
PublicNext
08/08/2022 07:17 pm