ಜೈಪುರ:ನಮ್ಮ ದೇಶದ ರಾಜಕೀಯ ವಿರೋಧವು ಈಗ ಬೇರೆ ರೂಪ ಪಡೆದುಕೊಂಡಿದೆ. ಅದು ದಿನೇ ದಿನೇ ಬದಲಾಗುತ್ತಲೇ, ಹಗೆತನವಾಗಿ ಪರಿವರ್ತಣೆಗೊಳ್ಳುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಇಂದಿನ ರಾಜಕೀಯ ಹಗೆತನ ಒಳ್ಳೆಯದಲ್ಲ. ಅದು ಆರೋಗ್ಯಕರ ಪ್ರಜಾಪ್ರಭುತ್ವವೂ ಲಕ್ಷಣವೂ ಅಲ್ಲ. ಈ ಹಿಂದೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಂದು ಗೌರವ ಇತ್ತು. ಆದರೆ, ಇಂದು ಅದು ಕಡಿಮೆ ಆಗುತ್ತಿದೆ ಎಂದು ಎನ್.ವಿ.ರಮಣ ಅಭಿಪ್ರಾಯ ಪಟ್ಟಿದ್ದಾರೆ.
ಆಗ ವಿರೋಧ ಪಕ್ಷಗಳಿಗೆ ಒಂದು ಸ್ಥಳಾವಕಾಶ ಇತ್ತು. ಆದರೆ, ಅದು ಈಗ ದುರಾದುಷ್ಟವಶಾತ್ ಕಡಿಮೆ ಆಗುತ್ತಿದೆ ಕೂಡ ಎನ್.ವಿ.ರಮಣ ಹೇಳಿದ್ದಾರೆ.
PublicNext
17/07/2022 07:12 am