ಲಖನೌ : ದಂಗೆಕೋರ ನಾಯಕರ ಅನಧಿಕೃತ ಹಾಗೂ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ ಸಿ.ಎಂ ಯೋಗಿ ಆದಿತ್ಯನಾಥ ಸರಕಾರ ಈಗ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಮಕ್ಕಳನ್ನು ಬಳಸಿಕೊಂಡು ಕಾನ್ಪುರ್ ಹಾಗೂ ಪ್ರಯಾಗ್ ರಾಜ್ ದಲ್ಲಿ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರಿ ನಷ್ಟವುಂಟು ಮಾಡಿ ತಲೆ ಮರೆಸಿಕೊಂಡಿರುವ ಸಮಾಜಘಾತುಕರ ಐಷಾರಾಮಿ ಮನೆಗಳನ್ನು ಹರಾಜು ಹಾಕಲು ನಿರ್ಧರಿಸಿದೆ.
ಹಿಂಸಾಚಾರ ನಡೆಸಿ ಈಗ ಅಡಿಗಿ ಕುಳಿತು, ಶರಣಾಗಲು ನಿರಾಕರಿಸುತ್ತಿರುವ ಮಾಸ್ಟರ್ ಮೈಂಡ್ ಗಳ ಅಕ್ರಮ ಆಸ್ತಿಪಾಸ್ತಿಯನ್ನು ಹರಾಜು ಹಾಕುವಂತೆ ಸಿ.ಎಂ ಯೋಗಿ ಆದಿತ್ಯನಾಥ ಪೊಲೀಸರಿಗೆ ಆದೇಶಿಸಿದ್ದಾರೆ.
ಯೋಗಿ ಸರಕಾರ, ತಲೆಮರೆಸಿಕೊಂಡಿರುವ ಎಲ್ಲ ದಂಗೆಕೋರರಿಗೆ ಶರಣಾಗಲು ಕಾಲಾವಕಾಶ ನೀಡಿದೆ. ಒಂದು ವೇಳೆ ಆ ಅವಧಿಯೊಳಗಾಗಿ ಸರೆಂಡರ್ ಆಗದಿದ್ದರೆ ಅವರೆಲ್ಲ ತಮ್ಮ ಆಸ್ತಿಪಾಸ್ತಿಯನ್ನು ಹರಾಜಿನಲ್ಲಿ ಕಳೆದುಕೊಳ್ಳಲಿದ್ದಾರೆ.
ದಂಗೆಕೋರರ ಆಸ್ತಿಪಾಸ್ತಿ ನೆಲಸಮಗೊಳಿಸುವ ಯೋಗಿ ಸರಕಾರದ ಕ್ರಮ ಕಾನೂನು ಬಾಹಿರ, ಅದಕ್ಕೆ ತಡೆನೀಡಬೇಕೆಂದು ಕೋರಿ ಮುಸ್ಲಿಂ ಸಂಘಟನೆಯೊಂದು ಸುಪ್ರಿಕೋರ್ಟ್ ಮೆಟ್ಟಲೇರಿತ್ತು.
ತಡೆ ನೀಡಲು ಸಾಧ್ಯವಿಲ್ಲ ಆದ್ರೆ ಸರಕಾರದ ಎಲ್ಲ ಪ್ರಕ್ರಿಯೆಗಳು ನಿಯಮಾವಳಿ ಪ್ರಕಾರ ನಡೆಯಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಬಹುದಾಗಿದೆ ಎಂದು ಸುಪ್ರಿಕೋರ್ಟ್ ತನ್ನ ಅಭಿಪ್ರಾಯ ತಿಳಿಸಿತ್ತು.
PublicNext
17/06/2022 11:59 am