ಹಾಸನ:ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿ ಆಗಿದ್ದ ಕೈ ನಾಯಕರಿಗೆ ಹಾಸನದ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಸಾವಿರಾರು ಕಾರ್ಯಕರ್ತರನ್ನ ಪಾದಯಾತ್ರೆಗೆ ಕರೆದುಕೊಂಡು ಹೋದ ಕೈ ನಾಯಕರ ವಿರುದ್ಧವೇ ಈಗ ಕೋವಿಡ್ ನಿಯಮ ಉಲ್ಲಂಘನೆಯ ಕೇಸ್ ದಾಖಲಾಗಿವೆ.
ಜನವರಿ-12 ರಂದು ಹಾಸನ ಜಿಲ್ಲೆಯಿಂದ ಕೈ ನಾಯಕರು ಸಾವಿರಾರು ಕಾರ್ಯಕರ್ತರನ್ನ ಪಾದಯಾತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಬಂದ್ಮೇಲೆನೆ ಈಗ ಕೋವಿಡ್ ಮಾರ್ಗಸೂಚಿ ಗೆ ವಿರುದ್ದವಾಗಿ ಜನರನ್ನು ಸೇರಿಸಿರೋದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ನಿರ್ಲಕ್ಷ್ಯ ವಹಿಸಿರೋ ಆರೋಪದಲ್ಲಿ ಕೇಸ್ ದಾಖಲಾಗಿವೆ.
ಈಗಾಗಲೇ ಇಲ್ಲಿಯ ಹಾಸನ ನಗರ, ಬಡಾವಣೆ,ಪೆನ್ಷನ್ ಮೊಹಲ್ಲ, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲ್ಲೂಕಿನ ಠಾಣೆಗಳಲ್ಲಿ ಕೈ ನಾಯಕರ ವಿರುದ್ಧ ಕೇಸ್ ದಾಖಲಾಗಿವೆ.
PublicNext
14/01/2022 11:07 am