ಬೆಂಗಳೂರು : ನೂತನ ವರ್ಷದಲ್ಲಿ ಪೊಲೀಸ್ ಇಲಾಖೆಯಲ್ಲಿ ಸ್ವಲ್ಪ ಬದಲಾವಣೆ ಗಾಳಿ ಬೀಸುವುದ ಖಚಿತ ಎನ್ನುವಂತಾಗಿದೆ.
ಆಡಳಿತಯಂತ್ರದಲ್ಲಿ ಬದಲಾವಣೆ ತರಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧರಾಗಿದ್ದಾರೆ.ಇದಕ್ಕೆ ಪುಷ್ಠಿ ನೀಡುವಂತೆ ಕನ್ನಡದ ಐಪಿಎಸ್ ಅಧಿಕಾರಿ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಎಂಟ್ರಿ ಕೊಡುವುದು ಬಹುತೇಕ ಪಕ್ಕಾ ಆಗಿದೆ.
ಹೌದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಬಿ.ದಯಾನಂದ್ ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಬಿ.ದಯಾನಂದ್ ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿದ್ದು ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ ಇದೆ.
ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿಗಳಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಉಮೇಶ್ ಕುಮಾರ್, ಅಲೋಕ್ ಕುಮಾರ್ , ಬಿ ದಯಾನಂದ್ ನಡುವೆ ಪೈಪೋಟಿ ಇದೆ. ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಮೇಲೆಯೂ ಅಧಿಕಾರಿಗಳು ಒತ್ತಡ ತಂದಿದ್ದಾರೆ. ಸಂಘ ಪರಿವಾರದ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸಿದ್ದಾರೆ ಎನ್ನುವ ವದಂತಿಯೂ ಜೋರಾಗಿದೆ.
ಹಿರಿಯ ಅಧಿಕಾರಿಗಳಾದ ಅಮೃತ್ ಪೌಲ್ ,ಪ್ರತಾಪ್ ರೆಡ್ಡಿ, ಹರಿಶೇಖರನ್ ಕೂಡ ರೇಸ್ ನಲ್ಲಿ ಇದ್ದಾರೆ. ಪೊಲೀಸ್ ಕಮಿಷನರ್ ಆಗಿರುವ ಕಮಲ್ ಪಂತ್ ವರ್ಗಾವಣೆಯಾಗುವುದು ಪಕ್ಕಾ ಆಗಿರುವ ಬೆನ್ನಲ್ಲೆ ಈ ಎಲ್ಲ ಬೆಳಗವಣಿಗೆಗಳು ನಡೆದಿವೆ.
PublicNext
01/01/2022 10:13 am