ಶಹಜಹಾನ್ ಪುರ: ಉತ್ತರ ಪ್ರದೇಶದಲ್ಲಿ ಹಿಂಸಾಚಾರಗಳು ಸಾಮಾನ್ಯ ಎಂಬಂತಾಗಿದೆ. ಶಹಜಾನ್‌ಪುರ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಹೀಗಾಗಿ ಇಲ್ಲಿ ಯಾರೂ ಸುರಕ್ಷಿತವಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
"ಕಾನೂನು ಮತ್ತು ನ್ಯಾಯಾಂಗ ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಆಧಾರ ಸ್ತಂಭವಾಗಿದೆ. ಶಹಜಹಾನ್‌ಪುರದ ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲಿ ವಕೀಲರ ಬರ್ಬರ ಹತ್ಯೆಯಾಗಿದೆ. ಇಂದಿನ ಉತ್ತರ ಪ್ರದೇಶದಲ್ಲಿ, ಮಹಿಳೆಯರು, ರೈತರು ಹಾಗೂ ವಕೀಲರು ಸೇರಿದಂತೆ ಯಾರೂ ಸುರಕ್ಷಿತವಾಗಿಲ್ಲ ಎನ್ನುವುದನ್ನು ನೆನಪಿಸುತ್ತದೆ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
19/10/2021 07:32 am