ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯ ಸಚಿವ ಸುಧಾಕರ್ ಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಟೆಂಡರ್ ಪ್ರಕ್ರಿಯೆ ರದ್ದು ಪಡಿಸಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿದೆ. 1,800 ಕೋಟಿ ಮೊತ್ತದಲ್ಲಿ ಆಂಬುಲೆನ್ಸ್ ನಿಯಂತ್ರಣಾ ಕೇಂದ್ರ ತೆರೆಯುವ ಟೆಂಡರ್ ಇದಾಗಿತ್ತು.

ಟೆಂಡರ್ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘2020ರ ಜನವರಿ 17ರಂದು ಟೆಂಡರ್ ಪ್ರಕ್ರಿಯೆ ರದ್ದುಪಡಿಸಲಾಗಿದೆ. ನ್ಯಾಯಾಲಯ ಇಡೀ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿರುವಾಗ, ಅನುಮತಿ ಪಡೆಯದೇ ಏಕಾಏಕಿ ಸರ್ಕಾರ ರದ್ದುಗೊಳಿಸಬಹುದೇ’ ಎಂದು ಪ್ರಶ್ನಿಸಿತು.

‘ಸಚಿವರ ಬದಲು ಮುಖ್ಯ ಕಾರ್ಯದರ್ಶಿ ಅವರನ್ನು ಪ್ರತಿವಾದಿಯಾಗಿ ಮಾಡಿಕೊಳ್ಳಬಹುದು’ ಎಂದು ಸರ್ಕಾರದ ಪರ ವಕೀಲರು ಮನವಿ ಮಾಡಿದರು. ‘ಟೆಂಡರ್ ಪ್ರಕ್ರಿಯೆ ರದ್ದುಗೊಳಿಸುವ ಆದೇಶದಲ್ಲಿ ಸಚಿವರ ಸಹಿ ಇದೆ’ ಎಂದು ಪೀಠ ಅಭಿಪ್ರಾಯಪಟ್ಟಿತು. ಸಚಿವರನ್ನು ಪ್ರತಿವಾದಿಯನ್ನಾಗಿಸಲು ಅನುಮತಿ ಕೋರಿ ಅರ್ಜಿದಾರರಾದ ಭಾರತ ಪುನರುತ್ತಾನ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಗೂ ಅನುಮತಿ ನೀಡಿದ ಪೀಠ, ಮಾರ್ಚ್ 30ಕ್ಕೆ ವಿಚಾರಣೆ ಮುಂದೂಡಿತು.

Edited By : Nirmala Aralikatti
PublicNext

PublicNext

26/02/2021 07:44 am

Cinque Terre

61.41 K

Cinque Terre

2

ಸಂಬಂಧಿತ ಸುದ್ದಿ