ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ 62 ಕ್ರಷರ್ ಘಟಕಗಳಿದ್ದು, ಅವುಗಳಿಗೆ ರಿನಿವಲ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಎಲ್ಲಿ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಯುತ್ತಿವೆಯೋ ಅಲ್ಲಿ ರೇಡ್ ಮಾಡುವಂತಹ ಕೆಲಸ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಗೆ ನಾವು ಕಡಿವಾಣ ಹಾಕಲಿದ್ದೇವೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ತುಪ್ಪರಿ ಹಳ್ಳಕ್ಕೆ ಯಾವ ಫ್ಯಾಕ್ಟರಿ ನೀರು ಹರಿದು ಬರುತ್ತಿದೆಯೋ ಅಂತಹ ಕಂಪೆನಿಗಳಿಗೆ ನೋಟಿಸ್ ಕೊಟ್ಟು ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ತಿಳಿಸಿದರು.
PublicNext
23/01/2021 06:43 pm