ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಲಿಬಾನ್ ಗಿಂತ ಅಲ್ ಕೈದಾ ತುಂಬಾ ಡೇಂಜರ್ ಎಂದ ಜೋ ಬೈಡನ್

ವಾಷಿಂಗ್ಟನ್: ತಾಲಿಬಾನಿಗಳು ಅಪ್ಘಾನಿಸ್ತಾನದ ಸಂಪೂರ್ಣ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಅಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಅಮೆರಿಕ ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ ಹೇಳಿಕೆ ಮಹತ್ವ ಪಡೆದಿದೆ. ಅಪ್ಘಾನಿಸ್ತಾನದಿಂದ ನಮ್ಮ ಸೈನ್ಯವನ್ನು ವಾಪಸ್ ಕರೆಸಿಕೊಂಡಿದ್ದರ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿಲ್ಲ. ತಾಲಿಬಾನಿಗಳಿಗಿಂತ ಅಲ್ ಕೈದಾ ಉಗ್ರ ಸಂಘಟನೆ ಹೆಚ್ಚು ಅಪಾಯಕಾರಿ ಎಂದು ಜೋ ಬೈಡನ್ ಹೇಳಿದ್ದಾರೆ.

ಅಪ್ಘಾನಿಸ್ತಾನದಲ್ಲಿರುವ ಕೊನೆಯ ಅಮೆರಿಕ ಪ್ರಜೆಯನ್ನು ತೆರವು ಮಾಡುವ ತನಕವೂ ನಮ್ಮ ಸೇನೆ ಅಲ್ಲಿ ಇರಲಿದೆ. ಅಫ್ಗಾನಿಸ್ತಾನದಲ್ಲಿ ಸೇನೆ ನಿಯೋಜಿಸುವುದಕ್ಕಿಂತ, ತಾಲಿಬಾನಿಗಳಿಗಿಂತ ಹೆಚ್ಚು ಅಪಾಯ ಕಾರಿಯಾಗಲಿರುವ ದೇಶಗಳಲ್ಲಿ ಸೇನೆ ನಿಯೋಜಿಸಬೇಕಾಗುತ್ತದೆ. ಸಿರಿಯಾದಲ್ಲಿ ಅಲ್‌-ಕೈದಾ ಹೆಚ್ಚು ಪ್ರಬಲವಾಗಿದೆ. ಅದು ತಾಲಿಬಾನಿಗಳಿಗಿಂತ ಹೆಚ್ಚು ಅಪಾಯಕಾರಿ’ ಎಂದು ಅವರು ಪ್ರತಿಪಾದಿಸಿದ್ದಾರೆ.

Edited By : Nagaraj Tulugeri
PublicNext

PublicNext

20/08/2021 11:35 am

Cinque Terre

81.79 K

Cinque Terre

14