ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PFI ನಿಷೇಧವನ್ನು ನಾನು ಬೆಂಬಲಿಸುವುದಿಲ್ಲ; ಅಸಾದುದ್ದೀನ್‌ ಓವೈಸಿ ವಿರೋಧ

ಹೈದರಾಬಾದ್: ಕೆಲವು ವ್ಯಕ್ತಿಗಳು ಅಪರಾಧ ಕೃತ್ಯ ಎಸಗಿದ್ದಾರೆ ಎಂಬ ಕಾರಣಕ್ಕೆ ಸಂಘಟನೆಯನ್ನೇ ನಿಷೇಧ ಮಾಡಬೇಕು ಎನ್ನುವುದು ಸರಿಯಾದ ಕ್ರಮವಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿಎಫ್‌ಐ ನಿಷೇಧವನ್ನು ಎಐಎಂಐ ಮುಖಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

ತಾವು ಯಾವಾಗಲೂ ಪಿಎಫ್‌ಐನ ನಡೆಯನ್ನು ಟೀಕಿಸಿದ್ದಾಗಿ ಮತ್ತು ಪ್ರಜಾಸತ್ತಾತ್ಮಕ ನಡೆಯನ್ನು ಬೆಂಬಲಿಸಿರುವುದಾಗಿ ಓವೈಸಿ ಪ್ರತಿಪಾದಿಸಿದ್ದಾರೆ. ಸಂಘಟನೆಯೊಂದರ ಜತೆ ನಂಟು ಹೊಂದಿದ್ದಾರೆ ಎನ್ನುವುದು ಯಾರನ್ನೋ ಶಿಕ್ಷೆಗೆ ಒಳಪಡಿಸಲು ಪ್ರಬಲ ಕಾರಣವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿತ್ತು ಎಂದು ಹೇಳಿದ್ದಾರೆ.

ಈ ಮಾದರಿಯ ಕಠೋರ ನಿಷೇಧವು ಅಪಾಯಕಾರಿಯಾಗಿದೆ. ಏಕೆಂದರೆ ಇದು ತನ್ನ ಮನಸಿನಾಳದಿಂದ ಮಾತನಾಡಲು ಬಯಸುವ ಯಾವುದೇ ಮುಸ್ಲಿಂ ವ್ಯಕ್ತಿ ಮೇಲಿನ ನಿಷೇಧವಾಗಿದೆ. ಭಾರತದ ಚುನಾವಣಾ ಪರಿಪೂರ್ಣತೆಯು ಫ್ಯಾಸಿಸಂ ಕಡೆಗೆ ಹೋಗುತ್ತಿರುವಾಗ, ಪ್ರತಿ ಮುಸ್ಲಿಂ ಯುವಕರನ್ನೂ ಈಗ ಪಿಎಫ್‌ಐ ಕರಪತ್ರದೊಂದಿಗೆ ಭಾರತದ ಕರಾಳ ಕಾನೂನಾದ ಯುಎಪಿಎ ಅಡಿ ಬಂಧಿಸಲಾಗುತ್ತದೆ ಎಂದು ಓವೈಸಿ ಹೇಳಿದ್ದಾರೆ.

'ಖಾಜಾ ಅಜ್ಮೇರಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು ನಂಟು ಹೊಂದಿದ್ದ ಸಂಘಟನೆಯನ್ನು ನಿಷೇಧಿಸಿದಲ್ಲ. ಆದರೆ ಪಿಎಫ್‌ಐ ಅನ್ನು ಹೇಗೆ ನಿಷೇಧಿಸಿದ್ದಾರೆ? ಸರ್ಕಾರವು ಬಲಪಂಥೀಯ ಬಹುಸಂಖ್ಯಾತ ಸಂಘಟನೆಗಳನ್ನು ಏಕೆ ನಿಷೇಧ ಮಾಡಿಲ್ಲ'? ಎಂದು ಪ್ರಶ್ನಿಸಿದ್ದಾರೆ.

'ಕೋರ್ಟ್‌ಗಳಿಂದ ಖುಲಾಸೆಗೊಳ್ಳುವ ಮುನ್ನ ಮುಸ್ಲಿಮರು ದಶಕಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ನಾನು ಯುಎಪಿಎಯನ್ನು ವಿರೋಧಿಸಿದ್ದೆ. ಯುಎಪಿಎ ಅಡಿ ತೆಗೆದುಕೊಳ್ಳುವ ಎಲ್ಲ ಕ್ರಮಗಳನ್ನೂ ನಾನು ವಿರೋಧಿಸುತ್ತೇನೆ. ಇದು ಸಂವಿಧಾನದ ಮೂಲ ರಚನೆಯಾಗಿರುವ ಸ್ವಾತಂತ್ರ್ಯದ ತತ್ವವನ್ನು ಹತ್ತಿಕ್ಕುವ ಕೆಲಸ ಮಾಡುತ್ತದೆ.

Edited By : Abhishek Kamoji
PublicNext

PublicNext

28/09/2022 10:37 pm

Cinque Terre

197.47 K

Cinque Terre

83