ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿ ಲಾಸ್ ನಲ್ಲಿದ್ರೂ ಸಿಎಂ ಬೊಮ್ಮಾಯಿ ಸಾಹೇಬ್ರೆ ನೀವೂ ಹೀಗೆ ಮಾಡಿದ್ದು ಸರೀನಾ?

ಬೆಂಗಳೂರು: ಲಾಸ್ ಲಾಸ್ ಲಾಸ್ ಸಾರಿಗೆ ನಿಗಮಗಳಲ್ಲಿ ಅತ್ಯಂತ ನಷ್ಟದಲ್ಲಿ ಇರೋದು ಎಂದ್ರೆ ಅದು ಬಿಎಂಟಿಸಿ. ಆರ್ಥಿಕ ಸಂಕಷ್ಟ, ಕೋಟಿ ಸಾಲದ ಸುಳಿಯಲ್ಲಿ ಸಿಲು ಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿರವರೇ ಮತ್ತಷ್ಟು ಬರೆ ಎಳೆದಿದ್ದಾರೆ.

ಹೌದು.ಪಬ್ಲಿಕ್ ನೆಕ್ಟ್‌ ಬಯಲು‌ ಮಾಡ್ತಿರುವ ಮೆಗಾ ಎಕ್ಸ್ ಕ್ಲೂಸಿವ್ ಸ್ಟೋರಿ ಇದು. ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಿಎಂಟಿಸಿ ಬಸ್ ದುರ್ಬಳಕೆ ಮಾಡಿ ಕೊಂಡ ಗಂಭೀರ ಆರೋಪ ಕೇಳಿ ಬಂದಿದೆ.

ನಿನ್ನೆ ಬೆಂಗಳೂರು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ರವರ ಕಾರ್ಯ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರನ್ನು ಕರೆ ತರಲು ಅನಧಿಕೃತ ವಾಗಿ ಸರ್ಕಾರ ಬಿಎಂಟಿಸಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಈ ಸಂಬಂಧ ಬರೋಬ್ಬರಿ 600 ಬಸ್ ಗಳನ್ನು ನಿನ್ನೆ ಒಂದೇ ದಿನ ಸರ್ಕಾರ ಬಳಕೆ ಮಾಡಿಕೊಂಡಿದೆ.

ಇದರಿಂದ ಬಿಎಂಟಿಸಿಗೆ ಒಂದು ದಿನಕ್ಕೆ ಬರೋಬ್ಬರಿ 81 ಲಕ್ಷ ರೂ. ನಷ್ಟವಾಗಿದೆ. ಸಾರ್ವಜನಿಕರು ಬಿಎಂಟಿಸಿ ಬಸ್ ಬುಕ್ ಮಾಡಿದ್ರೆ ಪ್ರತಿ ಕಿ.ಮೀ 45 ರೂ ನಂತೆ 300 ಕಿ.ಮೀ ದಿನದ ಮೊತ್ತ 13500 ರೂ ನೀಡಬೇಕು. ಅದರಂತೆ 600 ಬಸ್ ಬಾಡಿಗೆ 81 ಲಕ್ಷ ರೂ ಆಗಲಿದೆ. ಇದನ್ನು ಸರ್ಕಾರ ನೀಡಲಿದೆ ಎಂದು ಬಿಎಂಟಿಸಿ‌ ಅಧಿಕಾರಿಗಳು ಹೇಳುತ್ತಿದ್ದು, ಯಾವ ಇಲಾಖೆ ನೀಡುತ್ತೆ ಎಂದು ಪ್ರಶ್ನಿಸಿದ್ರೆ ಸರ್ಕಾರ ಕೇಳಿ ಎಂದು ಗದರಿಸುತ್ತಾರೆ.

ಒಟ್ಟಾರೆ ಬಿಎಂಟಿಸಿ ಲಾಸ್ ನಲ್ಲಿರುವ ಸಂದರ್ಭದಲ್ಲಿ ಸಿಎಂ ಸಾಹೇಬ್ರೆ ಬಸ್ ಗಳನ್ನು ಮಿಸ್ ಯೂಸ್ ಮಾಡಿಕೊಂಡು ಮತ್ತಷ್ಟು ನಷ್ಟಕ್ಕೆ ತಳ್ಳೋದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ‌ ಸಾರ್ವಜನಿಕ ವಲಯದಿಂದ ಕೇಳಿ ಬರ್ತಿದೆ.

ವರದಿ - ಗಣೇಶ್ ಹೆಗಡೆ

Edited By : Somashekar
PublicNext

PublicNext

21/06/2022 08:58 pm

Cinque Terre

76.72 K

Cinque Terre

14

ಸಂಬಂಧಿತ ಸುದ್ದಿ