ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ಫ್ಯೂ ಮಾಡೋದಾದ್ರೆ ಲಸಿಕೆ ಯಾಕ್ರೀ ಬೇಕು?: ಪ್ರತಾಪ್ ಸಿಂಹ ಕಿಡಿ

ಮೈಸೂರು: ಮತ್ತೆ ಲಾಕ್‌ಡೌನ್‌ ಮಾಡೋ ಹಾಗಿದ್ರೆ ಲಸಿಕೆ ಏಕೆ ಬೇಕಿತ್ತು ಎಂದು ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಲಸಿಕೆ ನೀಡಿದ್ದೇವೆ. ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಿದ್ದೇವೆ. ಎಲ್ಲ ಆಸ್ಪತ್ರೆ ಕಡೆಯೂ ಆಕ್ಸಿಜನ್‌ ಪ್ಲಾಂಟ್‌ಗಳನ್ನು ಅಳವಡಿಸಿದ್ದೇವೆ. ಈಗಿರುವಾಗ ಮತ್ತೆ ಲಾಕ್‌ಡೌನ್‌ ಮಾಡ್ತೀನಿ ಅಂದ್ರೆ ಲಸಿಕೆ ಏಕೆ ಬೇಕಿತ್ತು ಎಂದು ಪ್ರಶ್ನಿಸಿ ಕಿಡಿಕಾರಿದರು.

ಲಾಕ್‌ಡೌನ್‌, ಕರ್ಫ್ಯೂನಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಸರ್ಕಾರ ಜನರ ಜೀವ ಕಾಪಾಡುವುದರ ಜೊತೆಗೆ ಜೀವನವನ್ನು ಕಾಪಾಡಬೇಕಿದೆ. ಕಳೆದ ಎರಡು ವರ್ಷಗಳಿಂದ ಜನರ ವ್ಯಾಪಾರ, ವಹಿವಾಟಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಶುಕ್ರವಾರ ನಡೆಯುವ ಸಭೆಯಲ್ಲಿ ಜನರ ಬದುಕನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿ ತೆಗೆದುಕೊಳ್ಳಬೇಕು. ವೀಕೆಂಡ್‌ ಕರ್ಫ್ಯೂ, ನಿಷೇಧಾಜ್ಞೆಯನ್ನು ಸರ್ಕಾರ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

Edited By : Shivu K
PublicNext

PublicNext

20/01/2022 12:17 pm

Cinque Terre

92.27 K

Cinque Terre

7