ರೋಮ್: ಇಟಲಿಯ ನೂತನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಹೆಜ್ಜೆಗಳನ್ನು ಅನುಸರಿಸಿ ಮಸೀದಿಗಳು ಮತ್ತು ಮದರಸಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಹೌದು. ಇಟಲಿ ದೇಶದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಟ್ಟರ್ ಬಲಪಂಥೀಯ ಪಕ್ಷಗಳ ಮೈತ್ರಿಕೂಟ ಬಹುಮತ ಪಡೆದಿದೆ. ಪಕ್ಷದ ನಾಯಕಿ ಜಿಯಾರ್ಜಿಯಾ ಮೆಲೋನಿ ಪ್ರಧಾನಿಯಾಗಲಿದ್ದಾರೆ. ಇಟಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ. ಜಾರ್ಜಿಯಾ ಮೆಲೋನಿ ಇಟಲಿಯ ಇಸ್ಲಾಂ ಜನತೆಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ನಮಗೆ ತಿಳಿಯದ ಹೊರತು ಯಾವುದೇ ಹೊಸ ಮಸೀದಿಯನ್ನು ನಿರ್ಮಿಸಲು ನಾವು ಅನುಮತಿಸುವುದಿಲ್ಲ. ಹೊಸ ಮಸೀದಿಗೆ ಯಾರು ಇಮಾಮ್ ಆಗುತ್ತಾರೆ? ಅವರು ಪ್ರಾರ್ಥನೆಯಲ್ಲಿ ಏನು ಹೇಳುತ್ತಾರೆ? ಈ ಕಾರ್ಯಕ್ಕೆ ಎಲ್ಲಿಂದ ಹಣವನ್ನು ಪಡೆಯುತ್ತಾರೆ? ಪ್ರಾರ್ಥನೆ ಸುಡ್ ಇಟಾಲಿಯನ್ ಭಾಷೆಯಲ್ಲಿ ಇರಲೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
PublicNext
27/09/2022 12:46 pm