ನವದೆಹಲಿ: ಇತ್ತೀಚೆಗೆ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್ ಅಂತಿಮ ಸಂಸ್ಕಾರದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗಲಿದ್ದಾರೆ. ರಾಣಿ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನರಾಗಿದ್ದರು.
ಅವರ ಅಂತ್ಯ ಸಂಸ್ಕಾರವು ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ರಾಜಮನೆತನದ ಸಂಪ್ರದಾಯದಂತೆ ನಡೆಯಲಿದೆ. ಮುರ್ಮು ಅವರು ಸೆಪ್ಟೆಂಬರ್ 17ರಂದು ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಹಾಗೂ 19ರಂದು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
PublicNext
14/09/2022 07:23 pm