ಇಸ್ಲಾಮಾಬಾದ್: ಇಮ್ರಾನ್ ಖಾನ್ ಪಾಲಿಗೆ ಇಂದು ಮಾಡು ಇಲ್ಲವೆ ಮಡಿ ದಿನವಾಗಿದೆ. ಖಾನ್ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ಆಧರಿಸಿ, ಅವಿಶ್ವಾಸ ನಿರ್ಣಯದ ಮೇಲೆ ಪಾಕಿಸ್ತಾನ ಸಂಸತ್ತು ಇಂದು ಮತ ಚಲಾಯಿಸಲಿದೆ.
ಹಾಗಾಗಿ ಇಂದೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.ಒಂದೆಡೆ ವಿಶ್ವಾಸ ಮತ ಸಾಬೀತಿಗೆ ಇಮ್ರಾನ್ ಖಾನ್ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷಗಳು ಇಮ್ರಾನ್ ಖಾನ್ ರನ್ನು ಕಟ್ಟಿಹಾಕಲು ರಣತಂತ್ರ ರೂಪಿಸುತ್ತಲೇ ಇವೆ. ಸುಪ್ರೀಂಕೊರ್ಟ್ ನಲ್ಲಿ ತಮ್ಮ ಪರವಾಗಿ ತೀರ್ಪು ಬಂದ ಬಳಿಕ ಪ್ರತಿಪಕ್ಷಗಳು ಉತ್ಸಾಹ ಇನ್ನು ಹೆಚ್ಚಾಗಿದೆ. ಇಂದು ಅವಿಶ್ವಾಸ ನಿರ್ಣಯಕ್ಕೆ ಪ್ರತಿಪಕ್ಷಗಳು ಸಿದ್ಧವಾಗಿದ್ದು, ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕೆಲವೇ ಕ್ಷಣಗಳಲ್ಲಿ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ
ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಯಾವೊಬ್ಬ ಸದಸ್ಯರ ಸಹ ನ್ಯಾಷನಲ್ ಅಸೆಂಬ್ಲಿಗೆ ಆಗಮಿಸಲಿಲ್ಲ. ಬೇಕಂತಲೇ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ಇದೀಗ ಕೇವಲ 22 ಸದಸ್ಯರು ಮಾತ್ರ ಅಸೆಂಬ್ಲಿಗೆ ಆಗಮಿಸಿರುವುದು ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವಿಶ್ವಾಸ ನಿರ್ಣಯದ ಮತಯಾಚನೆ ಶುರುವಾಗಲಿದೆ.
PublicNext
09/04/2022 12:33 pm