ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ 'ಟೈಮ್': ಮೋದಿ, ಮಮತಾಗೆ ಸ್ಥಾನ

ನವದೆಹಲಿ: ಅಮೆರಿಕದ ನಿಯತಕಾಲಿಕೆ ಟೈಮ್ ಮ್ಯಾಗಜೀನ್ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಧಾನಿ ಮೋದಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲ ಸ್ಥಾನ ಪಡೆದಿದ್ದಾರೆ.

ಈ ಟೈಮ್ ಪಟ್ಟಿಯನ್ನ 6 ವರ್ಗಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಪ್ರವರ್ತಕ, ಕಲಾವಿದ, ನಾಯಕ, ಐಕಾನ್, ಟೈಟಾನ್ ಮತ್ತು ಇನ್ನೋವೇಟರ್ ಸೇರಿವೆ. ಪ್ರಪಂಚದಾದ್ಯಂತದ ಜನರನ್ನು ಪ್ರತಿ ವರ್ಗದಲ್ಲಿ ಸೇರಿಸಲಾಗಿದೆ.

ಟೈಮ್ ನಿಯತಕಾಲಿಕದ ಈ ಪಟ್ಟಿಯನ್ನ ವಿಶ್ವದಾದ್ಯಂತ ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿರುವ ಪ್ರತಿಯೊಂದು ನಮೂದನ್ನು ಸಂಪಾದಕರು ಸಾಕಷ್ಟು ಸಂಶೋಧನೆಯ ನಂತರ ತೆಗೆದುಕೊಳ್ಳುತ್ತಾರೆ. ಬುಧವಾರ ಬಿಡುಗಡೆಯಾದ ಟೈಮ್ʼನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಕೂಡ ಸೇರಿದ್ದಾರೆ. ಇದಲ್ಲದೇ, ಜೋ ಬೈಡನ್, ಕಮಲಾ ಹ್ಯಾರಿಸ್, ಕ್ಸಿ ಜಿನ್ ಪಿಂಗ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಕೂಡ ಪಟ್ಟಿಯಲ್ಲಿ ಸೇರಿಸಲಾಗಿದೆ.

Edited By : Nagaraj Tulugeri
PublicNext

PublicNext

16/09/2021 09:23 am

Cinque Terre

56.06 K

Cinque Terre

0