ನವದೆಹಲಿ: ಅಪ್ಘಾನ್ ನಲ್ಲಿರುವ ಎಲ್ಲ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಅಪ್ಘಾನಿಸ್ತಾನ್ ವಿಚಾರದಲ್ಲಿ ಭಾರತ ಯಾವ ನಿಲುವಿಗೆ ಬರಬೇಕು ಎಂಬ ಬಗ್ಗೆ ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೈಶಂಕರ್, ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಭೆಗಳನ್ನು ನಡೆಸಲು ತಯಾರಿದ್ದೇವೆ. ಇದಕ್ಕಾಗಿ ಎಲ್ಲ ತಯಾರಿ ನಡೆಸಿದ್ದೇವೆ ಎಂದಿದ್ದಾರೆ.
PublicNext
26/08/2021 05:44 pm