ನವದೆಹಲಿ: ಅಮೆರಿಕಾದ 46ನೇ ಅಧ್ಯಕ್ಷ ಜೊ ಬೈಡನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಹಲವು ಗಣ್ಯರು ಅಭಿನಂದನೆ ತಿಳಿಸಿದ್ದಾರೆ.
ಜೊ ಬೈಡನ್ ಅವರು ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿದ್ದರು.
ಆ ಸಮಯದಲ್ಲಿ ಭಾರತ ಮತ್ತು ಅಮೆರಿಕ ಸಂಬಂಧ ಬಲವರ್ಧನೆಗೆ ಅವರ ಕೊಡುಗೆ ಬಹಳ ಮಹತ್ವದ್ದಾಗಿದ್ದು ಬೆಲೆಕಟ್ಟಲಾಗದ ರೀತಿಯಲ್ಲಿ ಇತ್ತು ಎಂದಿರುವ ಮೋದಿ ಭಾರತ ಮೂಲದ ಅಮೆರಿಕದ ಉಪಾಧ್ಯಕ್ಷೆಯಾಗಲಿರುವ ಕಮಲಾ ಹ್ಯಾರಿಸ್ ಅವರನ್ನು ಕೂಡ ಅಭಿನಂದಿಸಿದ್ದಾರೆ.
ಅವರ ಯಶಸ್ಸು ಹೆಗ್ಗುರುತಾಗಿದ್ದು ಎಲ್ಲಾ ಭಾರತೀಯ ಮೂಲದ ಅಮೆರಿಕನ್ನರಿಗೆ ಇದು ಹೆಮ್ಮೆಯ ವಿಷಯ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ನೂತನ ಅಧ್ಯಕ್ಷ, ಉಪಾಧ್ಯಕ್ಷೆಯಾಗಲಿರುವವರಿಗೆ ಅಭಿನಂದನೆ ಹೇಳಿದ್ದಾರೆ.
ಇಬ್ಬರ ನಾಯಕತ್ವದಲ್ಲಿ ಭಾರತ ನಿಕಟ ಸಹಭಾಗಿತ್ವವನ್ನು ಎದುರು ನೋಡುತ್ತಿದ್ದು ನಮ್ಮ ದೇಶ ಮತ್ತು ವಿಶ್ವದಲ್ಲಿ ಶಾಂತಿ, ಅಭಿವೃದ್ಧಿಯನ್ನು ಕಾಪಾಡುವಲ್ಲಿ ಸಹಕಾರಿಯಾಗಲಿ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಜೊ ಬೈಡನ್ ಅವರು ಅಮೆರಿಕವನ್ನು ಒಗ್ಗೂಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
77 ವರ್ಷದ ಜೊ ಬೈಡನ್ ಮಾಜಿ ಅಧ್ಯಕ್ಷರಾಗಿದ್ದವರು, ಇದೀಗ 46ನೇ ಅಧ್ಯಕ್ಷರಾಗಲಿದ್ದಾರೆ.
ಅವರು ಹುಟ್ಟಿದ ರಾಜ್ಯ ಪೆನ್ಸಿಲ್ವೇನಿಯಾದಲ್ಲಿ ಜಯ ಗಳಿಸುವ ಮೂಲಕ 270ಕ್ಕೂ ಹೆಚ್ಚು ಎಲೆಕ್ಟೊರಲ್ ಮತ ಪಡೆದರು.
PublicNext
08/11/2020 07:45 am