ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವು ಸಾಧಿಸಲಿದೆ.
ಜೋ ಬಿಡೆನ್ ಗೆಲುವು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕೆರಳುವಂತೆ ಮಾಡಿದೆ. ಇಂತಹದ್ದೇ ಘಟನೆಯೊಂದು
ನೇವಾಡದಲ್ಲಿ ನಡದಿದ್ದು, ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೇವಾಡದಲ್ಲಿ ಮತಎಣಿಕೆ ಕಾರ್ಯವನ್ನು ಮುಗಿಸಿದ ಚುನಾವಣಾ ಅಧಿಕಾರಿಗಳು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬ ಜೋ ಬಿಡೆನ್ ವಿರುದ್ಧ ಕೂಗಾಟ ಶುರು ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷವು ಮತಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದೆ ಎಂದು ಈತ ಆರೋಪಿಸಿದ್ದಾನೆ.
PublicNext
05/11/2020 11:43 pm