ಶಿರಾ: ವರುಣನ ಕೃಪೆಯಿಂದ ಶಿರಾ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಅದೇ ರೀತಿ ತಾಲೂಕಿನ ಹಂದಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆರೆಗಳು ಕೋಡಿ ಹೋಗಿದ್ದು,ಹಂದಿಕುಂಟೆ ಗ್ರಾಮದ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಗಂಗಾಪೂಜೆ ಮಾಡಬೇಕಾದ ಸಂದರ್ಭದಲ್ಲಿ ಸೋಮವಾರ ಸ್ಥಳಕ್ಕೆ ಬಂದ ಶಾಸಕ ರಾಜೇಶ್ ಗೌಡರನ್ನು ತಡೆದ ಗ್ರಾಮಸ್ಥರು ಊರಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡದೆ ನಮ್ಮೂರಿನ ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದೀರಾ..! ನೀರಿನ ವಿಚಾರದಲ್ಲಿ ರಾಜಕೀಯ ಮಾಡಲು ಬಂದಿರುವ ನಿಮಗೆ ಧಿಕ್ಕಾರ ಎಂದು ಕೂಗಿ ಘೇರಾವ್ ಹಾಕಿದ ಘಟನೆ ನಡೆದಿದೆ.
ಸೋಮವಾರ ಶಾಸಕ ರಾಜೇಶ್ ಗೌಡ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಡಿ ಹರಿದ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಅದೇ ರೀತಿ ಹಂದಿಕುಂಟೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಶಾಸಕರಿಗೆ ಗೇರಾವ್ ಹಾಕಿರುವ ವಿಚಾರ ರಾಜಕೀಯ ಪ್ರೇರಿತವೊ ಅಥವಾ ಸ್ಥಳೀಯ ಜನರ ಆಕ್ರೋಶ ಎನ್ನುವ ಹಲವು ಚರ್ಚೆಗಳು ಶಿರಾ ಕ್ಷೇತ್ರದಲ್ಲಿ ಹರಿದಾಡುತ್ತಿವೆ.
-ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್
PublicNext
08/08/2022 10:34 pm