ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: "ಲಕ್ಷ್ಮಣ ಸವದಿ ಅವರೇ, ಕಾಗವಾಡ ಕ್ಷೇತ್ರದತ್ತಲೂ ಚಿತ್ತೈಸಿ" ; ಯುವರೈತನ ವೀಡಿಯೊ ವೈರಲ್

ವರದಿ: ಸಂತೋಷ ಬಡಕಂಬಿ

ಅಥಣಿ: ಮಾಜಿ ಉಪಮುಖ್ಯಮಂತ್ರಿ, ಹಾಲಿ ಶಾಸಕ ಲಕ್ಷ್ಮಣ ಸವದಿ ಅವರೇ, ನೀವು ಅಥಣಿ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ನಿಮ್ಮ ಪಕ್ಕದ ಕಾಗವಾಡ ಮತಕ್ಷೇತ್ರವೂ ನಿಮ್ಮ ವ್ಯಾಪ್ತಿಗೆ ಬರುತ್ತದೆ ಎಂಬುದು ನಿಮಗೆ ಗೊತ್ತಿಲ್ಲವೇ? ನಮ್ಮ ಕ್ಷೇತ್ರಕ್ಕೂ ಕಾಲಿಟ್ಟು ಅಭಿವೃದ್ಧಿ ಬಗ್ಗೆ ವಿಚಾರಿಸಿ ಎಂದು ರೈತನೋರ್ವ ಅಥಣಿಗೇ ಸೀಮಿತವಾಗಿರುವ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೀಡಿಯೊ ಹರಿಬಿಟ್ಟಿದ್ದಾನೆ.

ಕಾಗವಾಡ ತಾಲೂಕಿನ ಸಂಬರಗಿ ಗ್ರಾಮದ ಲಕ್ಷ್ಮಣ ಕುಮಾರ ಕೋಳಿ ಎಂಬ ಯುವರೈತ ಹರಿಬಿಟ್ಟ ಈ ವೀಡಿಯೊದಲ್ಲಿ ಈ ಹಿಂದೆ ಉಪಚುನಾವಣೆ ಬಂದ ಹಿನ್ನೆಲೆಯಲ್ಲಿ ಶ್ರೀಮಂತ ಪಾಟೀಲ ಅವರನ್ನು ಆಯ್ಕೆ ಮಾಡಿ ತನ್ನಿ ಎಂದು ಅವರನ್ನು ಕರೆದುಕೊಂಡು ಕಾಗವಾಡ ಕ್ಷೇತ್ರಕ್ಕೆ ಬಂದಿದ್ದ ತಾವು, ಕಳೆದ ಹಲವು ವರ್ಷಗಳಿಂದ ಇತ್ತ ಕಡೆ ತಲೆ ಹಾಕಿಲ್ಲ!

ತಾವು ಅಥಣಿ ಮತಕ್ಷೇತ್ರಕ್ಕೆ ಬೇರೆ ಬೇರೆ ಕಡೆಯಿಂದ ಅನುದಾನ ತಂದು ಹಲವಾರು ಕಾಮಗಾರಿಗಳನ್ನು ಮಾಡುತ್ತಿದ್ದೀರಿ. ಆದರೆ, ನಮ್ಮ ಕಾಗವಾಡಕ್ಕೂ ಯಾಕೆ ಅನುದಾನ ತರ್ತಾಯಿಲ್ಲ? ಈ ಮಲತಾಯಿ ಧೋರಣೆ ನಮ್ಮ ಮೇಲ್ಯಾಕೆ? ನಾವು ಸಹ ರೈತರು. ನಮ್ಮ ಕಡೆನೂ ಸ್ವಲ್ಪ ನೋಡಿ, ನಾವು ಸಹ ವೋಟ್ ಹಾಕಿದ್ದೇವೆ. ಕ್ಷೇತ್ರದ ಜನತೆಗೆ ತಾವು ಕೊಟ್ಟ ಭರವಸೆ ಹುಸಿ ಮಾಡಬೇಡಿ. ಕಾಗವಾಡ ಕ್ಷೇತ್ರದಲ್ಲೂ ಅಭಿವೃದ್ಧಿ ಕೆಲಸ ಮಾಡಿಸಿ ಎಂದು ವಿನಂತಿಸಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Edited By :
PublicNext

PublicNext

21/07/2022 01:25 pm

Cinque Terre

31.71 K

Cinque Terre

0

ಸಂಬಂಧಿತ ಸುದ್ದಿ