ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ : ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ, ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆಯ ಎಚ್ಚರ

ವಿಜಯಪುರ: ಸರಕಾರಿ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ,ವಿದ್ಯಾರ್ಥಿಗಳು ಹಾಗೂ ಬಸ್ ನಿರ್ವಾಹಕರ ಮಧ್ಯೆ ವಾಗ್ವಾದ ನಡೆದ ಘಟನೆ ತಾಲ್ಲೂಕಿನ ಬುರಣಾಪುರ ಗ್ರಾಮದಲ್ಲಿ ನಡೆದಿದೆ‌.

ಈ ಪ್ರತಿಭಟನೆಗೆ ಪಾಲಕರು ಕೂಡ ಸಾಥ್ ಕೊಟ್ಟಿದ್ದಾರೆ. ಬುರಾಣಪುರ, ಮದಭಾವಿ, ಡ್ಯಾಬೇರಿ ಹಾಗೂ ಬಸವನಗರ ಶಾಲಾ ವಿದ್ಯಾರ್ಥಿಗಳಿಗೆ ಬಸ್ ನ ಸರಿಯಾದ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ.ಸುಮಾರು 200 ವಿದ್ಯಾರ್ಥಿಗಳು ಇರುವಲ್ಲಿ ಕೇವಲ ಒಂದು ಬಸ್ ಬಿಡಲಾಗುತ್ತಿದೆ ಹಾಗೂ ವಿದ್ಯಾರ್ಥಿಗಳು ಕೈ ಮಾಡಿದ್ರು ಬಸ್ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.

ಇರೋ ಒಂದು ಬಸ್ ನಲ್ಲಿ ಜೀವ ಕೈಯಲ್ಲಿ ಹಿಡಿದೇ ಪ್ರಯಾಣ ಮಾಡುವಂತಹ ಪರಿಸ್ಥಿತಿ ಇದೆ ಹಾಗೂ ಈ ಮೊದಲು ಎರಡು ಬಸ್ ಇದ್ದವು ಇದೀಗ ಒಂದು ಬಸ್ ಕಡಿತಗೊಳಿಸಿ ಒಂದು ಬಸ್ ಬಿಡಲಾಗುತ್ತಿದೆ. ಹಲವು ಬಾರಿ ವಿದ್ಯಾರ್ಥಿಗಳು ಬಸ್ ಏರಲು ಹೋಗಿ ಆಯತಪ್ಪಿ ಬಿದ್ದಿರುವ ಪ್ರಕರಣಗಳು ನಡೆದಿವೆ ಎಂದು ಪೋಷಕರು ಆರೋಪಿಸಿದ್ದಾರೆ ಜತೆಗೆ ಬಸ್ ಸಮಸ್ಯೆ ಬಗೆ ಹರಿಯುವವರೆಗೆ ಪ್ರತಿಭಟನೆ ನಡೆಸುವುದಾಗಿ ಪಾಲಕರು ವಿದ್ಯಾರ್ಥಿಗಳು ಎಚ್ಚರಿಕೆ ಕೊಟ್ಟಿದ್ದಾರೆ.

Edited By : Shivu K
PublicNext

PublicNext

08/12/2021 11:19 am

Cinque Terre

44.56 K

Cinque Terre

1

ಸಂಬಂಧಿತ ಸುದ್ದಿ