ಸೋಹಾನಾ(ಹರಿಯಾಣ): ಉತ್ತಮ ಗುಣಮಟ್ಟದ ಸುಸಜ್ಜಿತ ರಸ್ತೆಗಳು ಬೇಕಾದರೆ ಜನರು ಹಣ ಕೊಡಲೇಬೇಕಾಗುತ್ತದೆ. ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯ ಪ್ರಗತಿ ಪರಿಶೀಲನೆ ನಂತರ ಮಾತನಾಡಿದ ನಿತಿನ್ ಗಡ್ಕರಿ, ಟೋಲ್ ಶುಲ್ಕ ಹೊರೆಯಾಗುತ್ತಿರುವ ಬಗ್ಗೆ ಜನ ದೂರುತ್ತಿದ್ದಾರೆ. ಹವಾನಿಯಂತ್ರಿತ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಬೇಕಾದರೆ ಅದಕ್ಕೆ ನೀವು ಹಣ ಕೊಡಲೇಬೇಕು ಇಲ್ಲವಾದರೆ ಹೊಲದಲ್ಲಿ ಮದುವೆ ಮಾಡಬೇಕು. ಹೀಗಾಗಿ ಉತ್ತಮ ರಸ್ತೆ ಸುಗಮ ಸಂಚಾರಕ್ಕಾಗಿ ಜನರು ಹಣ ನೀಡಲೇಬೇಕು ಎಂದು ಸಮರ್ಥಿಸಿಕೊಂಡರು. ದೇಶದಲ್ಲಿ ಕೆಲವೆಡೆ ಎಕ್ಸ್‌ಪ್ರೆಸ್ ವೇಗಳ ನಿರ್ಮಾಣವಾಗಿದೆ. ಇದರಿಂದ ಸಾರಿಗೆ ವೆಚ್ಚ ಹಾಗೂ ಇಂಧನ ಹಾಗೂ ಸಮಯ ಉಳಿತಾಯ ಆಗುತ್ತಿದೆ ಎಂದಿದ್ದಾರೆ.
PublicNext
17/09/2021 09:14 am