ಚಿತ್ರದುರ್ಗ : ಮಧ್ಯ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಬೆಂಗಳೂರಿನಿಂದ ದಾವಣಗೆರೆ ಮಾರ್ಗ ಮಧ್ಯೆ ಹೋಗುವಾಗ ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭದ್ರಾ ರಾಷ್ಟ್ರೀಯ ಯೋಜನೆ ಆಗಬೇಕು ಎನ್ನುವುದು ನಿಮ್ಮ ಆಸೆ ಹಾಗೂ ಜನರ ಕನಸಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳ ವೀಕ್ಷಣೆ ಮಾಡಲಿಕ್ಕೆ ಹಾಗೂ ಟೆಕ್ನಿಕಲ್ ಪಿಜಿಬಲಿಟಿ ಅಧ್ಯಯನ ಮಾಡಲಿಕ್ಕೆ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸಲಾಗಿತ್ತು. ಅವರು ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಸಭೆಗಳಾಗಿ ಈ ಯೋಜನೆಯನ್ನು "ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಕ್ಕೆ ತಾತ್ವಿಕ ಒಪ್ಪಿಗೆ ಆಗಿದೆ. ಇನ್ನೊಂದು ಸಭೆ ನಡೆಯಬೇಕಿದೆ. ಭಾರತ ಸರ್ಕಾರದ ಜಲಶಕ್ತಿ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಯಲಿದ್ದು, ತದನಂತರ ಕೇಂದ್ರ ಸಚಿವ ಸಂಪುಟಕ್ಕೆ ಬಂದು ಅದ್ಕೆ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.
ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸರಿಸುಮಾರು 4700 ಹೆಚ್ಚು ಕೋಟಿಗಳನ್ನು ಖರ್ಚು ಮಾಡಲಾಗಿದೆ ಎಂದರು. ಚಿತ್ರದುರ್ಗ ಬರದ ಜಿಲ್ಲೆಯಾಗಿದೆ. ಮಳೆ ಕಡಿಮೆ ಬಿಳುವ ಪ್ರದೇಶವಾಗಿದೆ. ರೈತರ ಭೂಮಿಗೆ ನೀರು ಹರಿಸುವಂತದ್ದು, ಮತ್ತು ಕುಡಿಯುವ ನೀರಿಗಾಗಿ ಆಹಾಕಾರ ಇರುವ ಪ್ರದೇಶಗಳಿಗೆ ನೀರು ಕೊಡುವ ವ್ಯವಸ್ಥೆ ಆಗುತ್ತದೆ ಸ್ವಲ್ಪ ದಿನ ಕಾಯಬೇಕು ಎಂದು ಸಚಿವರು ತಿಳಿಸಿದರು. ಇನ್ನು ಇಂದಿರಾ ಕ್ಯಾಂಟಿನ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸುವ ಪ್ರಸ್ತಾವನೆ ನಮ್ಮ ಸರ್ಕಾರದಲ್ಲಾಗಲಿ ಅಥವಾ ಸಚಿವ ಸಂಪುಟದ ಮುಂದಾಗಲಿ ಬಂದಿಲ್ಲ ಎಂದು ಹೇಳಿದರು. ಬಂದಾಗ ಏನು ಹೇಳಬೇಕು ಆಗ ಹೇಳುತ್ತೆವೆ ಎಂದರು. ನಮ್ಮ ಸರ್ಕಾರದ ಯೋಜನೆಗಳು ವ್ಯಕ್ತಿಗತವಾಗಿರದೆ ಅವು ರಾಷ್ಟ್ರೀಯ ಯೋಜನೆಗಳ ಗುರುತನ್ನು ಪಡೆದುಕೊಳ್ಳಬೇಕು ಆ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂದರು.
ಪ್ರಧಾನ ಮಂತ್ರಿ ಕೃಷಿ ಸಂಚಯಿನಿ ಯೋಜನೆ, ಪ್ರಧಾನಿ ಮಂತ್ರಿಆವಾಸ್ ಯೋಜನೆ ಎಂದು ಮಾಡಿದ್ದಾರೆ.ಸರ್ಕಾರದ ಹೆಸರಿಗೆ ಹೋಗಿರುತ್ತವೆ. ನಾವು ಬಹಳ ಹಳೆ ಕಾಲದಂತೆ ರಾಜ ಮಹಾರಾಜರ ಆಡಳಿತದ ಪರ ಮನೆತನದ ಹೆಸರು ಇಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರು ಹಿರಿಯರು.ಅವರು ನಿನ್ನೆ ತಾನೇ 74 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನಮ್ಮೆಲ್ಲರ ಆಸೆ ಇದೆ. ಸಿದ್ದರಾಮಯ್ಯ ಅವರು ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ನಗು ನಗುತ್ತಾ ಬದುಕಬೇಕು ಎಂದು ನಮ್ಮ ಆಸೆ ಇದೆ. ಭಗವಂತ ಅವರಿಗೆ ಅಂಥದೊಂದು ಅವಕಾಶ ಕೊಡಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ತಿಳಿಸಿದರು.
PublicNext
14/08/2021 09:53 am