ಬೆಂಗಳೂರು : ಬೆಂಗಳೂರು ಪ್ರವಾಹದ ಹಿನ್ನೆಲೆ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅತಿವೃಷ್ಟಿ ಚರ್ಚೆ ಹಿನ್ನೆಲೆಯಲ್ಲಿ ಸದನದಲ್ಲಿ ಉತ್ತರಿಸಿದ ಸಿಎಂ ಬೊಮ್ಮಾಯಿ ‘ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು, 7 ಪಟ್ಟಣ ಪಂಚಾಯತಿ ಸೇರಿಕೊಂಡಿದ್ದು, ನಿರ್ವಹಣೆ ಸಮಸ್ಯೆಯಾಗಿದೆ. ರಾಜಕಾಲುವೆಗಳನ್ನು ಮೂಲ ಸ್ವರೂಪಕ್ಕೆ ತರಲು ಆದ್ಯತೆ ನೀಡಲಾಗಿದೆ. ಕೆರೆಗಳ ನಿರ್ವಹಣೆಗೆ ವಿಶೇಷ ಗಮನ ವಹಿಸಲಾಗುವುದು ಎಂದು ತಿಳಿಸಿದರು.
50 ವರ್ಷಗಳ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಸಿದೆ. ಬೆಂಗಳೂರು ರಾಜಧಾನಿ ಅಭಿವೃದ್ದಿಗೆ 1,617 ಕೋಟಿ ರೂ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ 300 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಇನ್ನೂ ಸ್ಯಾಂಕಿ ಟ್ಯಾಂಕ್ ಸಿಸ್ಟಮ್ ರೀತಿಯಲ್ಲಿ ಎಲ್ಲಾ ಕೆರೆಗಳ ಸಿಸ್ಟಮ್ ತರಲು ಯೋಜಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
PublicNext
23/09/2022 07:26 am