ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಒಂಬುಡ್ಸ್ ಮನ್ ಮಾಡಿರುವ ಆದೇಶದ ವಿರುದ್ಧ ಮೇಲ್ಮನವಿ: ಅಶೋಕ ಮುಳಗುಂದಮಠ

ಗದಗ ಜಿಲ್ಲಾ ಪಂಚಾಯತ್ ಒಂಬುಡ್ಸ್ ಮನ್ ತನಿಖಾ ಆದೇಶದ ವಿರುದ್ಧ ಮೇಲ್ಮನವಿ ಕಳಿಸಲಾಗುವುದು ಎಂದು ಶಿಗ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಮುಳಗುಂದಮಠ ಹೇಳಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪ್ರವಾಸೀ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು 2020 - 21 ಮತ್ತು 2021 - 22 ರಲ್ಲಿ ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ರೈತರ ಜಮೀನಿನಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿದೆಯೆಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ರು.

ಹೀಗಾಗಿ ಗದಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಒಂಬುಡ್ಸ್ ಮನ್ ಇವರಿಗೆ ಸದರಿ ದೂರು ಅರ್ಜಿ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಿದ್ರು. ಒಂಬುಡ್ಸ್ ಮನ್ ಅವರು ಕಾಮಗಾರಿಗಳ ಮೇಲೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಹಣ ಪಾವತಿ ಮಾಡಿರೋ ಕಾರಣ, ಹಣ ದುರುಪಯೋಗವಾಗಿದೆ ಎಂದು ಪಿ.ಡಿ.ಓ ಮತ್ತು ಅಧ್ಯಕ್ಷರಿಗೆ ವಸೂಲಾತಿಗೆ ಸೂಚಿಸಿ ಆದೇಶ ನೀಡಿದ್ದಾರೆ.

ಆದರೆ ನಮ್ಮ ಮೇಲೆ ಆರೋಪ ಮಾಡಿರುವ ಈ ಆದೇಶವು ಸತ್ಯಕ್ಕೆ ದೂರವಾಗಿದ್ದು, ನಾವು ಮೇಲ್ಮನವಿ ಕಳಿಸುತ್ತೇವೆ ಎಂದು ಅಶೋಕ ಮುಳಗುಂದಮಠ ಹೇಳಿದ್ದಾರೆ.

Edited By :
PublicNext

PublicNext

09/08/2022 05:32 pm

Cinque Terre

122.65 K

Cinque Terre

0