ಬೆಳಗಾವಿ: ರೈತರಿಗೆ ಮೋಸಮಾಡುವ ನಕಲುಕೋರರಿಗೆ ಕೃಷಿ ಇಲಾಖಾಧಿಕಾರಿಗಳು ಸಿಂಹಸ್ವಪ್ನವಾಗಬೇಕು ಎಂದು ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ ಮತ್ತು ಗದಗ ಜಿಲ್ಲಾ ಉಸ್ತುವಾರಿ ಬಿ.ಸಿ ಪಾಟೀಲ್ ಖಡಕ್ ಸೂಚನೆ ನೀಡಿದರು.
ಬೆಳಗಾವಿಯ ಸುವರ್ಣಸೌಧ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಚಿವರ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅನ್ನ ನೀಡುವ ರೈತನಿಗೆ ಕಳಪೆ ಗೊಬ್ಬರ ರಾಸಾಯನಿಕ ಔಷಧಿ ಬಿತ್ತನೆ ಬೀಜ ಮಾರವಂತಹದಂತಹ ನೀಚ ಕೆಲಸದ ದುರಂತ ಮತ್ತೊಂದಿಲ್ಲ.ಇಂತವರ ಮೇಲೆ ಕೃಷಿ ಇಲಾಖೆ ಸದಾ ಹದ್ದಿನಕಣ್ಣು ಇಟ್ಟಿರಬೇಕು.ರೈತನನ್ನು ಪೋಷಿಸಿ ಬೆಳೆಸಿ ಅನ್ನದಾತನಿಗೆ ಹರಸಬೇಕು.ಹಿಂದೆ ಕೃಷಿ ಇಲಾಖೆ ಅಧಿಕಾರಿಗಳೆಂದರೆ ಹೆಚ್ಚು ಗೌರವ ಬೆಲೆ ಅಷ್ಟಾಗಿ ಸಿಗುತ್ತಿರಲಿಲ್ಲ.ಆದರೆ ಇದೀಗ ತಾವು ಬಂದಮೇಲೆ ಕೃಷಿ ವಿಚಕ್ಷಣಾ ದಳದ ಕಾರ್ಯವೈಖರಿಯಿಂದ ಇಡೀ ಇಲಾಖೆಗೆ ಮಹತ್ವ ಗೌರವ ಬಂದಿದೆ. ನಕಲುಕೋರರು ರೈತನಿಗೆ ಮೋಸ ಮಾಡುವವರು ಕೃಷಿ ಇಲಾಖೆ ಕೃಷಿ ಇಲಾಖಾಧಿಕಾರಿಗಳೆಂದರೆ ಎಚ್ಚೆತ್ತುಕೊಳ್ಳಬೇಕು. ತಪ್ಪು ಮಾಡಬಾರದು, ರೈತನಿಗೆ ಮೋಸ ಮಾಡಬಾರದು ಎಂದು ಅಂಜಬೇಕು.ಇಂತಹ ಕೆಲಸವನ್ನು ಕೃಷಿ ಇಲಾಖಾಧಿಕಾರಿಗಳು ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ನಕಲು ರಸಗೊಬ್ಬರ,ಕಳಪೆ ಬೀಜ ಕೃತಕ ಅಭಾವ ಹೆಚ್ಚಿಸುವ ರಾಜ್ಯದಲ್ಲಿ ಕೃಷಿ ವಿಚಕ್ಷಣಾ(ಜಾಗೃತ)ದಳ ಹೆಚ್ಚು ಕ್ರಿತಾತ್ಮಕವಾಗಿದೆ.ಜಾಗೃತದಳದಿಂದ ಇಲ್ಲಿವರೆಗೆ 28 ಕೋ ರೂ ಮೊತ್ತದ ನಕಲಿ ಕಳಪೆ ರಸಗೊಬ್ಬರ ಬಿತ್ತನೆಬೀಜವನ್ನು ಸೀಜ್ ಮಾಡಲಾಗಿದೆ.15 ಲಕ್ಷ ರೂ ದಂಡವಾಗಿ 148 ನಕಲುಕೋರರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ರೈತನಿಗೆ ಮೋಸ ಮಾಡುವವರನ್ನು ಗುರುತಿಸುವುದು ಅವರ ಮೇಲೆ ಕಣ್ಣಿಡುವುದು ಬರೀ ಜಾಗೃತದಳದ ಕೆಲಸವೆಂಬುದನ್ನು ತಾತ್ಸಾರ ಭಾವನೆ ತೋರದೇ ಇದು ರೈತನ ಕೆಲಸ ಅನ್ನದಾತನ ಕೆಲಸ ಇದಕ್ಕಾಗಿ ಎಲ್ಲರೂ ಮುಂದಾಗಿ ಕೃಷಿಕನನ್ನು ಹರಸಬೇಕೆಂಬ ಸದ್ಭಾವನೆ ಎಲ್ಲರ ಮನದಲ್ಲಿ ತಾಳಬೇಕು ಎಂದು ಬಿ.ಸಿ ಪಾಟೀಲ್ ಸಭೆಯಲ್ಲಿ ಸಲಹೆ ನೀಡಿದರು.
ರಸಗೊಬ್ಬರದ ಕೊರತೆ ಎಲ್ಲಿಯೂ ಇಲ್ಲ. ಆದರೆ ಕೆಲ ವ್ಯಾಪಾರಸ್ಥರು ದುರಾಸೆಯ ಲಾಭಕ್ಕಾಗಿ ಕೃತಕ ಲಾಭ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವ ಹುನ್ನಾರ ಮಾಡುತ್ತಲೇ ಇರುತ್ತಾರೆ. ರಸಗೊಬ್ಬರವನ್ನು ಕೇಂದ್ರ ಸಕಾಲದಲ್ಲಿ ಸಮರ್ಪಕವಾಗಿ ಪೂರೈಸುತ್ತಲೇ ಇದೆ.ರಸಗೊಬ್ಬರದ ದಾಸ್ತಾನು ಇದೆ.ಇದನ್ನು ಅಧಿಕಾರಿಗಳು ರೈತರಿಗೆ ಒತ್ತಿ ಹೇಳುವ ಕೆಲಸ ಮಾಡಬೇಕು ಎಂದರು.
PublicNext
03/09/2022 08:08 pm