ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್​​ ಸಿಎಂನನ್ನೇ ಸೋಲಿಸಿದ ಲಾಭ್ ಸಿಂಗ್ ತಾಯಿ ಸರ್ಕಾರಿ ಶಾಲೆಯ ಆಯಾ

ಚಂಡೀಗಡ: ಪಂಜಾಬ್​​ ಸಿಎಂ ಚರಣ್​​ಜಿತ್​ ಸಿಂಗ್​ ಚೆನ್ನಿ ಅವರನ್ನು 37 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಜೀವನ ಇಂದಿನ ಯುವ ಜನರಿಗೆ ಸ್ಫೂರ್ತಿದಾಯಕವಾಗಿದೆ.

ಹೌದು. ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಬರ್ನಾಲಾ ಜಿಲ್ಲೆಯ ಬದೌರ್​ ಎಸ್​​ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಲಾಭ್ ಸಿಂಗ್ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. 35 ವರ್ಷದ ಲಾಭ್​ ಸಿಂಗ್​ ಸಾಮಾನ್ಯ ಕುಟುಂಬಕ್ಕೆ ಸೇರಿದ ವ್ಯಕ್ತಿ. 12ನೇ ತರಗತಿವರೆಗೂ ಓದಿಕೊಂಡಿರೋ ಲಾಭ್​ ಸಿಂಗ್​ ಮೊಬೈಲ್​​ ರಿಪೇರಿ ಮಾಡೋ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ತಂದೆ ಚಾಲಕರಾಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವಿಪರ್​​ ಆಗಿ ಕೆಲಸ ಮಾಡುತ್ತಿದ್ದಾರೆ.

ಲಾಭ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ತಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯಾ (ಸ್ವೀಪರ್) ಆಗಿ ಕೆಲಸ ಮಾಡುತ್ತಿದ್ದಾರೆ. "ಮಗನ ಗೆಲುವಿಗೆ ನಾನು ಹೆಮ್ಮೆಪಡುತ್ತೇನೆ. ನನ್ನ ಮಗ 'ಪೊರಕೆ' ಚಿಹ್ನೆಯ ಪಕ್ಷವನ್ನು ಸೇರಿ ದೇಶವನ್ನು ಸ್ವಚ್ಛ ಮಾಡುತ್ತಿದ್ದಾನೆ. ನಾನು ಇದನ್ನು (ಪೊರಕೆಯನ್ನು) ಜೀವನೋಪಾಯಕ್ಕಾಗಿ ನನ್ನ ಜೀವನದುದ್ದಕ್ಕೂ ಬಳಸಿದ್ದೇನೆ" ಎಂದು ಅವರು ಹೇಳಿದ್ದಾರೆ.

Edited By : Vijay Kumar
PublicNext

PublicNext

13/03/2022 01:40 pm

Cinque Terre

82.77 K

Cinque Terre

13

ಸಂಬಂಧಿತ ಸುದ್ದಿ