ನವದೆಹಲಿ: ದೆಹಲಿಯ ಕುತುಬ್ ಮಿನಾರ್ ಮುಸ್ಲಿಂ ಸ್ಮಾರಕ ಅಲ್ಲವೇ ಅಲ್ಲ. ಅದು ಹಿಂದೂ ಸ್ಮಾರಕ. ಹಿಂದೂ ರಾಜನೇ ಕಟ್ಟಿಸಿದ್ದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಈ ಸತ್ಯದ ಮೇಲೆ ಈಗ ಬೆಳಕು ಚೆಲ್ಲಿದ್ದಾರೆ.
ಕುತುಬ್ ಮಿನಾರ್ ಒಂದು ಸೂರ್ಯ ಗೋಪುರ.ಇದನ್ನ ಕಟ್ಟಿಸಿರೋದು ರಾಜಾ ವಿಕ್ರಮಾಧಿತ್ಯ. ಇದು ಮುಸ್ಲಿಂ ಸ್ಮಾರಕ ಅಲ್ಲವೇ ಅಲ್ಲ ಎಂದು ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಹೇಳಿದ್ದಾರೆ.
ಇತ್ತೀಚಿಗೆ ಕೆಲವು ಹಿಂದೂ ಸಂಘಟನೆಗಳು ಕುತುಬ್ ಮಿನಾರ್ ಮುಂದೆ ಪ್ರತಿಭಟನೆ ಮಾಡಿವೆ. ಕುತುಬ್ ಮಿನಾರ್ ಮೂಲ ಹೆಸರು ವಿಷ್ಣುಸ್ತಂಭ. ಇದು ಹಿಂದೂ ರಾಜಾ ಕಟ್ಟಿಸಿರೋದು. ಇದರ ಹೆಸರನ್ನ ಬದಲಿಸಬೇಕು. ಹಿಂದೂಗಳ ವಶಕ್ಕೆ ಈ ಪ್ರದೇಶವನ್ನ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದರು.
ಈಗ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರ ಮಾತು ಈ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
PublicNext
19/05/2022 07:44 am