ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಿಯಾಣದಲ್ಲಿ 18 ವರ್ಷದವರಿಗೂ ಉಚಿತ ಬೂಸ್ಟರ್ ಡೋಸ್

ನವದೆಹಲಿ: ಕೋವಿಡ್ ನಾಲ್ಕನೆ ಅಲೆ ಜನರನ್ನ ಕಾಡಲು ಶುರು ಮಾಡಿದೆ.ಭೀತಿ ಹುಟ್ಟಿಸಿ ಮತ್ತೆ ಮಾಸ್ಕ್ ಹಾಕಿಕೊಳ್ಳುವಂತೆ ಮಾಡ್ತಿದೆ. ಇದರಿಂದ ಬಚಾವ್ ಆಗಲು ಈಗ ಹರಿಯಾಣ ಸರ್ಕಾರ ಒಂದ್ ಐಡಿಯಾ ಮಾಡಿದೆ. ಏನ್ ಅದು ಅಂತಿರೋ. ಬನ್ನಿ, ಹೇಳ್ತೀವಿ.

ನಮ್ಮ ರಾಜ್ಯದಲ್ಲಿ ಬೂಸ್ಟರ್ ಡೋಸ್ ಅನ್ನ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿಯೇ ಹಾಕಲಾಗುತ್ತಿದೆ. ಆದರೆ, ಹರಿಯಾಣ ಸರ್ಕಾರ ತಮ್ಮ ರಾಜ್ಯದ ಯುವಕರಿಗೆ ಉಚಿತವಾಗಿಯೇ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದೆ. ಹಾಗಂತ ಇದು ವಯೋವೃದ್ಧರನ್ನ ಕಡೆಗಣಿಸಿಲ್ಲ. ಬದಲಿಗೆ ಅವರಿಗೂ ಉಚಿತವಾಗಿಯೇ ಬೂಸ್ಟರ್ ಡೋಸ್ ಕೊಡ್ತಿದೆ.

18 ರಿಂದ 59 ವರ್ಷದ ಎಲ್ಲರಿಗೂ ಇಲ್ಲಿ ಉಚಿತವಾಗಿಯೇ ಬೂಸ್ಟರ್ ಡೋಸ್ ಕೊಡಲು ಇಲ್ಲಿಯ ಸರ್ಕಾರ ಡಿಸೈಡ್ ಮಾಡಿದೆ. ಈ ಒಂದು ಯೋಜನೆಗಾಗಿಯೇ ಸರ್ಕಾರ 300 ಕೋಟಿ ವೆಚ್ಚ ಮಾಡುತ್ತಿದೆ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

Edited By :
PublicNext

PublicNext

26/04/2022 05:45 pm

Cinque Terre

48.03 K

Cinque Terre

0

ಸಂಬಂಧಿತ ಸುದ್ದಿ