ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಕೇಸ್ ನಲ್ಲಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದರು.
ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಆದ್ರೆ ಅದ್ಧೂರಿಯಾಗಿ ಬಿಡುಗಡೆಯಾಗ್ಬೇಕು ಅನ್ನೋ ಕನಸು ಕಂಡಿದ್ದ ಶಶಿಕಲಾಗೆ ಕೊರೊನಾ ಕಂಟಕವಾಗಿಎದ.
ಶಶಿಕಲಾ ಬಿಡುಗಡೆಯಾಗ್ತಿದ್ದಂತೆ ಭರ್ಜರಿ ಸ್ವಾಗತ ಕೋರಿ ಬೃಹತ್ ಮೆರವಣಿಗೆ ಮೂಲಕ ಕರೆದೊಯ್ಯಲು ಬೆಂಬಲಿಗರು ಪ್ಲ್ಯಾನ್ ಮಾಡಿದ್ದರು. ಆದ್ರೆ ಶಶಿಕಲಾ ಹಾಗೂ ಅವರ ಬೆಂಬಲಿಗರ ಕನಸಿಗೆ ಕೊರೊನಾ ತಣ್ಣೀರೆರಚಿದೆ. ಯಾಕಂದ್ರೆ ಕೊರೊನಾ ಅಟ್ಯಾಕ್ ಆಗಿ, ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಶಶಿಕಲಾ ಕೊವಿಡ್ 19 ಪ್ರೋಟೋಕಾಲ್ ಪ್ರಕಾರ 14 ದಿನ ಯಾರ ಸಂಪರ್ಕದಲ್ಲಿಯೂ ಇರಬಾರದು. ಒಂದು ವಾರ ಹೋಮ್ ಕ್ವಾರಂಟೈನ್ ಕಡ್ಡಾಯ ಆಗಿರುತ್ತೆ. ಒಂದು ವೇಳೆ ಇಂದೇ ಬಿಡುಗಡೆಯಾದ್ರೂ ಶಶಿಕಲಾ ತಮ್ಮೂರಿಗೆ ಹೋಗುವಂತಿಲ್ಲ. ವೈದ್ಯರು ಡಿಸ್ಚಾರ್ಜ್ ಮಾಡಿದ ಬಳಿಕ ಆ್ಯಂಬುಲೆನ್ಸ್ ನಲ್ಲೇ ತೆರಳಿ ಹೋಮ್ ಕ್ವಾರಂಟೈನ್ ಆಗ್ಬೇಕಿದೆ.
ಅಂದಹಾಗೆ ಶಶಿಕಲಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯಲ್ಲಿ ಜೈಲಿನ ಕೆಲ ಪ್ರಕ್ರಿಯೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದ್ದು ಜೈಲಾಧಿಕಾರಿಗಳು ಗುಣಮುಖರಾದ ನಂತರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಶಶಿಕಲಾ ಪರ ವಕೀಲರು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರ ಕರೆತರಲು ಮುಂದಾಗಿದ್ದಾರೆ. ಹೀಗಾಗಿ ಜೈಲಧಿಕಾರಿಗಳ ಸಮ್ಮುಖದಲ್ಲಿ ಆಸ್ಪತ್ರೆಗೆ ತೆರಳಿ ಶಶಿಕಲಾ ಸಹಿ ಪಡೆದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ.
PublicNext
27/01/2021 07:52 am