ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಂಡ್ರೆ 7,000 ರೂ. ಹಣ ಕೊಡ್ತಾರಂತೆ

ವಾಷಿಂಗ್ಟನ್: ಇನ್ನೂ ವ್ಯಾಕ್ಸಿನ್ ಪಡೆಯದೇ ಇರುವವರು ಶೀಘ್ರದಲ್ಲಿ ಪಡೆಯುವಂತೆ ಅಮೆರಿಕ ಸರ್ಕಾರ ಹೊಸ ಪ್ಲ್ಯಾನ್ ಹಾಕಿದೆ. ಆದರೆ ನೀವು ವ್ಯಾಕ್ಸಿನ್ ಹಾಕಿಸಿಕೊಂಡು 7000 ರೂಪಾಯಿ ಪಡೆಯಲು ಅಮೆರಿಕ ಪ್ರಜೆಯಾಗಿರಬೇಕು ಅಷ್ಟೇ. ಯಾಕಪ್ಪ ಅಂದ್ರೆ, ಇಂತಹ ಘೋಷಣೆ ಹೊರಡಿಸಿರೋದು ಅಮೆರಿಕದ ಅಧ್ಯಕ್ಷರು.

ಈ ನಡುವೆ ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಮತ್ತೊಂದು ಕಡೆ ಅಮೆರಿಕದಲ್ಲಿ ಕೊರೊನಾ 4ನೇ ಅಲೆಯ ಭೀತಿ ಸೃಷ್ಟಿಯಾಗಿದೆ. ಈಗಾಗಲೇ ಕೊರೊನಾದ 3 ಅಲೆಗಳನ್ನ ನೋಡಿ ಬೆಚ್ಚಿಬಿದ್ದಿರುವ ಅಮೆರಿಕದಲ್ಲಿ 4ನೇ ಅಲೆ ಎದ್ದಿದೆ. ಮೆಲ್ಲಗೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿತ್ಯವೂ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪುತ್ತಿದೆ.

ಹೀಗಾಗಿ ಅಲರ್ಟ್ ಆಗಿರುವ ಬೈಡನ್ ಆಡಳಿತ, ಆದಷ್ಟು ಬೇಗ ಬಾಕಿ ಇರುವ ತನ್ನೆಲ್ಲಾ ಪ್ರಜೆಗಳಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಲಸಿಕೆ ಹಾಕಿಸಿಕೊಂಡರೆ 7 ಸಾವಿರ ರೂಪಾಯಿ ಹಣ ಕೊಡಲು ಮುಂದಾಗಿದೆ. ಈ ಬಗ್ಗೆ ಬೈಡನ್ ಕಚೇರಿಯಿಂದ ಖಡಕ್ ಆದೇಶ ಹೊರಬಿದ್ದಿದೆ.

Edited By : Nagaraj Tulugeri
PublicNext

PublicNext

31/07/2021 01:17 pm

Cinque Terre

138.36 K

Cinque Terre

7