ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಶಾಸಕಿ ಡೆಂಗ್ಯೂಗೆ ಬಲಿ : ಸಂತಾಪ ಸೂಚಿಸಿದ ಸಿಎಂ

ಅಹಮದಾಬಾದ್: ಗುಜರಾತ್ ನ ಬಿಜೆಪಿ ಶಾಸಕಿ 44 ವರ್ಷದ ಆಶಾ ಪಟೇಲ್ ಡೆಂಗ್ಯೂಯಿಂದಾಗಿ ಸಾವನ್ನಪ್ಪಿದ್ದಾರೆ.

ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಮೆಹ್ಸಾನಾ ಜಿಲ್ಲೆಯ ಉಂಜಾ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಇವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಆಶಾ ಪಟೇಲ್ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ್ ಸಂತಾಪ ಸೂಚಿಸಿದ್ದಾರೆ. 2019ರಲ್ಲಿ ಆಡಳಿತಾರೂಢ ಬಿಜೆಪಿಯ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

Edited By : Nirmala Aralikatti
PublicNext

PublicNext

13/12/2021 01:11 pm

Cinque Terre

42.7 K

Cinque Terre

6