ಫರಿದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಫರಿದಾಬಾದ್‌ನಲ್ಲಿ 'ಅಮೃತಾ ಆಸ್ಪತ್ರೆ'ಯನ್ನು ಉದ್ಘಾಟನೆ ಮಾಡಿದ್ದಾರೆ.. ಈ ಫರೀದಾಬಾದ್ನ ಅಮೃತಾ ಆಸ್ಪತ್ರೆ ಒಟ್ಟು 2,600 ಬೆಡ್ಗಳನ್ನು ಹೊಂದಿದ್ದು ಏಷ್ಯಾದ ಅತಿ ದೊಡ್ಡ ಖಾಸಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಎಂದೇ ಹೇಳಲಾಗಿದೆ. ಈ ಆಸ್ಪತ್ರೆ ಶೀಘ್ರದಲ್ಲೇ ಸೌರಶಕ್ತಿ ಚಾಲಿತವಾಗಲಿದೆ ಎಂದು ಹೇಳಲಾಗಿದೆ.
ತದನಂತರ ಪಂಜಾಬ್‌ಗೆ ಭೇಟಿ ನೀಡಲಿದ್ದು, ಪಂಜಾಬ್‌ನ ಮೊಹಾಲಿಯ ನ್ಯೂ ಚಂಡೀಗಢದಲ್ಲಿ 'ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವನ್ನುಮೋದಿ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಸೋಮವಾರ ಮಾಹಿತಿ ನೀಡಿದೆ.
ಅಮೃತಾ ಆಸ್ಪತ್ರೆಯ ಉದ್ಘಾಟನೆಯ ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಆಧುನಿಕ ವೈದ್ಯಕೀಯ ಮೂಲಸೌಕರ್ಯಕ್ಕೆ ಉತ್ತೇಜನ ಸಿಗಲಿದೆ. 2,600 ಹಾಸಿಗೆಗಳನ್ನು ಹೊಂದಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರುವ ಅಮೃತಾ ಆಸ್ಪತ್ರೆಯನ್ನು ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತದೆ ಎಂದು ಅದು ಹೇಳಿದೆ.
ಸುಮಾರು 6,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಆಸ್ಪತ್ರೆಯು ಫರಿದಾಬಾದ್ ಮತ್ತು ಇಡೀ ಎನ್‌ಸಿಆರ್ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಮೊಹಾಲಿ ಆಸ್ಪತ್ರೆಯು ಪಂಜಾಬ್ ಮತ್ತು ನೆರೆಯ ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಪ್ರಯತ್ನದ ಭಾಗವಾಗಿದೆ ಎಂದು ಪಿಎಂಒ ಕಚೇರಿ ತಿಳಿಸಿದೆ.
ಆಸ್ಪತ್ರೆಯು ಏಳು ಅಂತಸ್ತಿನ ಕಟ್ಟಡದಲ್ಲಿ ಮೀಸಲಾದ ಸಂಶೋಧನಾ ಬ್ಲಾಕ್ ಅನ್ನು ಹೊಂದಿದೆ. ಇದು ಒಟ್ಟು ಮೂರು ಲಕ್ಷ ಚದರ ಅಡಿಗಳಷ್ಟು ವಿಶೇಷವಾದ ಗ್ರೇಡ್ A ಯ D GMP ಲ್ಯಾಬ್‌ಗಳನ್ನು ಹೊಂದಿದೆ. ನಾವು ವೈದ್ಯಕೀಯ ವಿಜ್ಞಾನದಲ್ಲಿ ವಿಶ್ವದ ಕೆಲವು ದೊಡ್ಡ ಸಂಸ್ಥೆಗಳ ಜೊತೆ ಸಂಶೋಧನಾ ಸಹಯೋಗವನ್ನು ಪ್ರವೇಶಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಹೇಳಲಾಗಿದೆ.
PublicNext
24/08/2022 01:23 pm